ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಡಿ.2 ರಂದು ಸೋಮವಾರ ಷಷ್ಠಿಯ ಪ್ರಯುಕ್ತ ಬೆಳ್ಳಿ ರಥೋತ್ಸವ ಕಿರು ರಥೋತ್ಸವ ನಡೆಯಿತು. ದೇವರ ಬಲಿ ಉತ್ಸವ ನಡೆದು ದೇವರು ಬೆಳ್ಳಿ ರಥ ಹಾಗೂ ಕಿರುರಥದಲ್ಲಿ ಆಗಿ ಪೂಜೆ ನಡೆದ ಬಳಿಕ ಸೇರಿದ ಭಕ್ತಾದಿಗಳು ರಥವನ್ನು ದೇವಳದ ಒಂದು ಸುತ್ತು ಎಳೆದು ನಂತರ ದೇವರ ಪೂಜೆ ನಡೆಯಿತು.
ದೇವಳದ ತಂತ್ರಿಗಳು , ಅರ್ಚಕರು, ಮೊಕ್ತೇಸರರು , ಗುತ್ತಿನವರು ಸಾವಿರ ಸೀಮೆಯ ಭಕ್ತಾಧಿಗಳು ಉಪಸ್ಥಿತರಿದ್ದರು. ಗಾಣಿಗ ದೀಪಸ್ಥಂಭ ಸೇವಾ ಸಮಿತಿ ಪೊಳಲಿ ವತಿಯಿಂದ ಅನ್ನದಾನ ಸೇವೆ ನಡೆಯಿತು.

