ಗುರುಪುರ : ಗುರುಪುರ ಪೇಟೆಯ ಹಳೆಯ ಮಾರುಕಟ್ಟೆ ಪ್ರದೇಶದಲ್ಲಿ ಗುರುಪುರ ಗ್ರಾಮ ಪಂಚಾಯತ್‍ನ 1.5 ಲಕ್ಷ ರೂ ಅನುದಾನದಿಂದ ಹೊಸದಾಗಿ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯವನ್ನು ಡಿ. 3ರಂದು ಗ್ರಾಪಂ ಅಧ್ಯಕ್ಷೆ ರುಕಿಯಾ ಉದ್ಘಾಟಿಸಿದರು.

gur-dec-3-toilet udgatane-1

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಜಿ ಎಂ ಉದಯ ಭಟ್ ಮಾತನಾಡಿ, ಬೆಳೆಯುತ್ತಿರುವ ಗುರುಪುರ ಪೇಟೆಯಲ್ಲಿ ಸಾರ್ವಜನಿಕ ಶೌಚಾಲಯದ ಕೊರತೆ ಇರುವುದು ಪಂಚಾಯತ್ ಗಮನಕ್ಕೆ ಬಂದಿದ್ದು, ಅದರಂತೆ ಇಲ್ಲಿ ಪುರುಷರು ಮತ್ತು ಸ್ತ್ರೀಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ. ಸಾರ್ವಜನಿಕರು ಇದನ್ನು ತಮ್ಮದೇ ಸ್ವತ್ತೆಂದು ಭಾವಿಸಿ, ಸದುಪಯೋಗ ಪಡೆಯುವುದರೊಂದಿಗೆ ಸ್ವಚ್ಛತೆಯತ್ತ ಗಮನಹರಿಸಬೇಕು ಎಂದರು.

gur-dec-3-toilet udgatane-2

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರು, ಗುರುಪುರದ ಉದ್ಯಮಿ ಪಾಂಡುರಂಗ ಕಾಮತ್ ಪಂಚಾಯತ್ ಸಿಬ್ಬಂದಿ ಇರ್ಶಾದ್ ಹಾಗೂ ಗ್ರಾಮಸ್ಥರು ಇದ್ದರು.

By suddi9

Leave a Reply

Your email address will not be published. Required fields are marked *