ಕೈಕಂಬ: ದಕ್ಷಿಣ ಕನ್ನಡ ಜಿಲ್ಲಾ SKSSF ಆಶ್ರಯದಲ್ಲಿ ಮೀಲಾದ್ ಕ್ಯಾಂಪೈನ್ ಸಮಾರೋಪ ಜಶ್ನೇ ಮದೀನಾ ಎಂಬ ಹೆಸರಿನಲ್ಲಿ ಬೃಹತ್ ಮೀಲಾದ್ ಕಾನ್ಫರೆನ್ಸ್ ಡಿಸೆಂಬರ್ 2 ಸೋಮವಾರದಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಸಂಜೆ 6 ಗಂಟೆಗೆ ನಡೆಯಲಿರುವುದು. ಸಮಾರಂಭದಲ್ಲಿ ಮುಖ್ಯ ಭಾಷಣಗಾರರಾಗಿ ಅಂತಾರಾಷ್ಟೀಯ ಖ್ಯಾತಿಯ ವಾಗ್ಮಿ ಬಹು: ಎ. ಎಂ. ನೌಷಾದ್ ಬಾಖವಿಯವರು ಆಗಮಿಸಲಿದ್ದಾರೆ. ಅಲ್ಲದೇ ಜಿಲ್ಲೆಯ ಉನ್ನತ ವಿದ್ವಾಂಸರು ಹಾಗೂ ಸಾಮಾಜಿಕ, ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ.
ಈಗಾಗಲೇ ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿದ್ದು ವಿವಿಧ ವಲಯಗಳಿಂದ ಸಾವಿರಾರು ಜನರು ಸೇರುವ ನಿರೀಕ್ಷೆಯಿದೆ.ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ SKSSF ಕೈಕಂಬ ವಲಯ ಸಮಿತಿ ಅಧ್ಯಕ್ಷರಾದ ಜಮಾಲುದ್ದೀನ್ ದಾರಿಮಿ ಕರೆ ನೀಡಿದ್ದಾರೆ ಎಂದು ಅಬ್ದುಲ್ ಸಲಾಂ ಅಡ್ಡೂರು ಪ್ರಕಟನೆಣೆಯಲ್ಲಿ ತಿಳಿಸಿದ್ದಾರೆ
