ಮೂಲ್ಕಿ: ಮೂಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಕಿನ್ನಿಗೋಳಿ ಸಮೀಪದ ಐಕಳ ಪಾದೆ ಸಮೀಪದ ಕೋರೆಯಲ್ಲಿ ವಾಸವಾಗಿರುವ ಮೂಲತಃ ಉತ್ತರ ಕನರ್ಾಟಕದ ಗದಗ ಸಮೀಪದ ಶಿರಟ್ಟಿ ತಾಲ್ಲೂಕ ಗೊಜನೂರು ನಿವಾಸಿಯಾದ ಹಾಲಪ್ಪ ಎಂಬವರ ಮಗಳು ಸವಿತ(19) ಸೆ. 24 ನೇ ತಾರೀಕಿನಿಂದ ಕಾಣೆಯಾಗಿರುವುದಾಗಿ ಮೂಲ್ಕಿ ಪೊಲೀಸರಿಗೆ ದೂರು ನೀಡಲಾಗಿದೆ.
napatte
ಸುಮಾರು 15 ವರ್ಷಗಳಿಂದ ಹಾಲಪ್ಪ ಕುಟುಂಬ ಐಕಳ ಸಂತೋಷ ಹೆಗ್ಡೆಯವರ ಕೋರೆಯಲ್ಲಿ ಕೆಲಸಕ್ಕಿದ್ದು ಇವರ ಪುತ್ರಿ ಸವಿತ ಐಕಳ ಪಾಂಪೈ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದು ಕಿನ್ನಿಗೋಳಿಯ ಜೆರಾಕ್ಸ್ ಅಂಗಡಿಗೆ ಕಳೆದ ಎಂಟು ತಿಂಗಳಿನಿಂದ ಕೆಲಸಕ್ಕೆ ಸೇರಿದ್ದಳು. ಈಕೆಗೆ ಕೋರೆಯಲ್ಲಿ ಕೆಲಸ ಮಾಡುತ್ತಿದ್ದ ಕ್ರೇನ್ ಆಪರೇಟರ್ ಗದಗ ರೋಣ ನಿವಾಸಿ ರಮೇಶ ಎಂಬವನ ಜತೆ ಸಲುಗೆ ಇತ್ತು ಎಂದು ತಿಳಿದು ಬಂದಿದ್ದು ಇಬ್ಬರೂ ಕಾಣೆಯಾಗಿದ್ದು . ಈ ಸಂಬಂದ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *