ಬಂಟ್ವಾಳ; ವಿಪಕ್ಷ ಬಿಜೆಪಿ ಸದಸ್ಯರ ಬಹಿಷ್ಕಾರದ ನಡುವೆಯೂ ಮಂಗಳವಾರ ನಡೆದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಪುರಸಭಾ ವ್ಯಾಪ್ತಿಯ ಎಲ್ಲಾ ಸಮಸ್ಯೆಗಳಿಗೆ ಕೌನ್ಸಿಲರ್ ಗಳೇ ಕಾರಣ ವೆಂಬಂತೆ ಮಾಧ್ಯಮಗಳು ಬಿಂಬಿಸುತ್ತಿದೆ ಎಂದು ಸದಸ್ಯರು ಮಾಧ್ಯಮಗಳ ಮೇಲೆ ಹರಿಹಾಯ್ದ ಘಟನೆ ನಡೆದಿದೆ.
ಅಧ್ಯಕ್ಷೆ ವಸಂತಿ ಚಂದಪ್ಪ ಅವರು ಸಭಾಧ್ಯಕ್ಷತೆ ವಹಿಸಿದ್ದರು. ಸದಸ್ಯ ಬಿ.ಮೋಹನ್ ಅವರು ವಿಷಯ ಪ್ರಸ್ತಾಪಿಸಿ, ಕೆಲವು ಸಮಸ್ಯೆಗಳನ್ನು ಮಾಧ್ಯಮಗಳು ಕೌನ್ಸಿಲರ್ ಗಳನ್ನೇ ಟಾರ್ಗೆಟ್ ಆಗಿ ಬಿಂಭಿಸುತ್ತಿದೆ ಎಂದು ಆರೋಪಿಸದರು. ಇದಕ್ಕೆ ಸದಸ್ಯರಾದ ಸದಾಶಿವ ಬಂಗೇರ, ಮಹಮ್ಮದ್ ನಂದರಬೆಟ್ಟು, ಗಂಗಾಧರ ,ಚಂಚಲಾಕ್ಷಿ ಧ್ವನಿಗೂಡಿಸಿದರು. ನಾಯಿ ಸತ್ತರೂ ನಮ್ಮನ್ನೇ ಹೊಣೆಮಾಡುತ್ತಾರೆ, ರಸ್ತೆಯಲ್ಲಿ ನಾಯಿ ಸತ್ತರೆ ಕೌನ್ಸಿಲರ್ ಗಳು ಏನು ಮಾಡಬೇಕು ಎಂದು ಸದಸ್ಯೆ ಚಂಚಲಾಕ್ಷಿ ಪ್ರಶ್ನೆ ಮುಂದಿಟ್ಟರೆ, ಇದಕ್ಕೆ ಸಮಜಾಯಿಷಿಕೆ ನೀಡಿದ ಸದಾಶಿವ ಬಂಗೇರ, ನಮ್ಮನ್ನು ಎಚ್ಚರಿಸುವುದು ಅವರ ಕೆಲಸ, ಅವರ ಕೆಲಸ ಅವರು ಮಾಡುತ್ತಾರೆ, ಆದರೆ ಸಮಸ್ಯೆಗಳನ್ನು ಬಿಂಬಿಸುವ ವೇಳೆ ಕೌನ್ಸಿಲರ್ ಗಳನ್ನು ಟಾರ್ಗೆಟ್ ಮಾಡಬೇಡಿ ಎಂದು ಸದಸ್ಯ ಬಿ.ಮೋಹನ್ ಸಲಹೆ ನೀಡಿದರು.


ಹೋರಾಟಗಾರರ ಮನೆಮುಂದೆಯೇ ಗೂಡಂಗಡಿ ಇಡಲಿ..
ಬಿ.ಸಿ.ರೋಡಿನಲ್ಲಿ ಯಾವುದೇ ಬೀದಿ ಬದಿ ವ್ಯಾಪಾರಸ್ಥರನ್ನು ಪುರಸಭೆ ತೆರವುಗೊಳಿಸಿಲ್ಲ, ಆದರೆ ಸಾರ್ವಜನಿಕ ಹಿತದೃಷ್ಟಿಯಿಂದ ಮೇಲ್ಸೇತುವೆ ಅಡಿಯಲ್ಲಿ ಕಾರ್ಯಚರಿಸುತ್ತಿದ್ದ ಅನಧಿಕೃತ ಫಾಸ್ಟ್ ಫುಡ್ ಹಾಗೂ ಕೆಲ ಗೂಡಂಗಡಿಗಳನ್ನು ಮಾತ್ರ ತೆರವುಗೊಳಿಸಲಾಗಿದೆ ಎಂದು ಚರ್ಚೆಯ ವೇಳೆ ಸದಸ್ಯ ಸದಾಶಿವ ಬಂಗೇರ , ಬೀದಿಬದಿ ವ್ಯಾಪಾರಸ್ಥರ ಪರವಾಗಿ ಪ್ರತಿಭಟನೆ ನಡೆಸಿದ ಹೋರಾಟಗಾರರಿಗೆ ಪರೋಕ್ಷವಾಗಿ ಟಾಂಗ್ ನೀಡಿದರಲ್ಲದೆ, ಅವರ ಬಗ್ಗೆ ಅನುಕಂಪ ಇದ್ದರೆ ಅಂತಹಾ ಹೋರಾಟಗಾರರು ತಮ್ಮ ಮನೆಮುಂದೆಯೇ ಗೂಡಂಗಡಿ ಇಡಲು ಸ್ಥಳಾವಕಾಶ ನೀಡಲಿ ಎಂದು ಸವಾಲೆಸೆದರು. ಪುರಸಭಾ ವ್ಯಾಪ್ತಿಯಲ್ಲಿ ರಸ್ತೆ ಬದಿ ವ್ಯಾಪಾರ ನಡೆಸುವವರ ಸರ್ವೆ ನಡೆಸಿ, ಅವರಿಗೆ ಗುರುತಿನ ಚೀಟಿ ನೀಡಿ ಸೂಕ್ತ ಸ್ಥಳಾವಕಾಶ ಒದಗಿಸುವ ಬಗ್ಗೆ ಸಭೆ ಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.
ಅಕ್ರಮಕಟ್ಟಡ ತಡೆಗೆ ಕ್ರಮ
ಪುರಸಭಾ ವ್ಯಾಪ್ತಿಯಲ್ಲಿ ಇನ್ನುಮುಂದೆ ಅಕ್ರಮಕಟ್ಟಡಗಳ ನಿರ್ಮಾಣ ತಡೆಗಟ್ಟುವ ನಿಟ್ಟಿನಲ್ಲಿ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಕಟ್ಟಡ ನಿ ರ್ಮಾನದ ಪ್ರಾರಂಭಿಕ ಹಂತದಲ್ಲಿ ಪ್ರಮಾಣ ಪತ್ರ ನೀಡುವುದು, ಬಳಿಕ ಎರಡನೇ ಹಂತದಲ್ಲಿ ಇಂಜಿನಿಯರ್ ರಿಂದ ಪರಿಶೀಲಿಸಿ ಅವರ ವರದಿಯನ್ವಯ ಕಟ್ಟಡ ಪರವಾನಿಗೆ ನೀಡಲು ನಿರ್ಧರಿಸಲಾಯಿತು. ಇದೇವೇಳೆ ಪೌರಾಡಳಿತದ ನಿರ್ದೇಶನದಂತೆ ಮುನ್ಸಿಪಾಲ್ಟಿಗಳಿಗೆ ಪೊಲೀಸ್ ಅಧಿಕಾರ ನೀಡುವ ಬಗ್ಗೆ ಪುರಸಭೆ ತೀಮರ್ಾನಕೈಗೊಂಡಿತು. ಈ ವಿಚಾರದಲ್ಲಿ ಸದಸ್ಯರಾದ ಶರೀಫ್, ಮೊನಿಶ್ ಆಲಿ , ಮಹಮ್ಮದ್ ನಂದರಬೆಟ್ಟು, ರಾಮಕೃಷ್ಣ ಆಳ್ವ, ಜಗದೀಶ್ ಕುಂದರ್ ಸದಾಶಿವ ಬಂಗೇರ, ಇಕ್ಬಾಲ್ ಗೂಡಿನಬಳಿ ರವರು ಚಚರ್ೆಯಲ್ಲಿ ಪಾಲ್ಗೊಂಡರು.
ಕಳೆದ ವಾರ ಪಾಣೆಮಂಗಳೂರು ಮತ್ತು ಬಿ.ಸಿ.ರೋಡು ಪರಿಸರಕ್ಕೆ ನಾಲ್ಕುದಿನಗಳ ಕಾಲ ಕುಡಿಯುವ ನೀರಿಲ್ಲದೆ, ಸಾರ್ವಜನಿಕರು ತೊಂದರೆ ಅನುಭವಿಸಬೇಕಾಯ್ತು. ಮುಂದಿನ ದಿನದಲ್ಲಿ ಈ ರೀತಿ ಆಗದಂತೆ ಪಯರ್ಾಯ ವ್ಯವಸ್ಥೆಯನ್ನು ಮಾಡಬೇಕೆಂದು ಸದಸ್ಯ ಇಕ್ಬಾಲ್ ಸಭೆಯಗಮನಕ್ಕೆ ತಂದರು ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಸದಾಶಿವ ಬಂಗೇರ ರವರು ಏಕಕಾಲದಲ್ಲಿ ಎರಡೂ ಪಂಪ್ಗಳು ಕೆಟ್ಟು ಹೋಗಿರುವುದು ಹೇಗೆ, ಇದನ್ನು ನಿರ್ವಹಿಸುವವರು ಯಾರು ಈಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸದಸ್ಯ ವಾಸುಪೂಜಾರಿಯವರು, ಎಲ್ಲಾ ಪಂಪ್ ಹೌಸ್ಗಳಿಗೆ ಸಿ.ಸಿ.ಕ್ಯಾಮೆರಾ ಅಳವಡಿಸಬೇಕು, ಇದರಿಂದ ಆಗುವ ಸಮಸ್ಯೆಹಾಗೂ ನಷ್ಟವನ್ನು ತಡೆಗಟ್ಟಬಹುದು ಎಂದರು.
ಉಪಾಧ್ಯಕ್ಷೆ ಯಾಸ್ಮಿನ್, ಮುಖ್ಯಾಧಿಕಾರಿ ಲೀನಾಬ್ರಿಟ್ಟೋ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಪ್ರಭಾದೇವಿ ಉಪಸ್ಥಿತರಿದ್ದರು.

