ಬಂಟ್ವಾಳ: ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ (ರಿ), ಶಿಶು ಅಭಿವೃದ್ದಿ ಯೋಜನಾಧಿಕಾರಿ ಬಂಟ್ವಾಳ ಇದರ ವಾರ್ಷಿಕ ಮಹಾಸಭೆ ಮತ್ತು ಬ್ಲಾಕ್ ಸೊಸೈಟಿಯ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರದಲ್ಲಿ ನಡೆಯಿತು.
ಬಳಿಕ 2014-15 ನೇ ಸಾಲಿನ ಪದಾಧಿಕಾರಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಶಾರದ ಹೂಹಾಕುವ ಕಲ್ಲು, ಉಪಾಧ್ಯಕ್ಷರಾಗಿ ಸುಮಿತ್ರಾ ಚೆನೈತ್ತೋಡಿ, ಗೀತಾ ಜಯತೀರ್ಥ ನರಿಕೊಂಬು ಕೋಶಾಧಿಕಾರಿಯಾಗಿ ಮತ್ತು 10ಜನ ಕಾರ್ಯಕಾರಿಣಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಬಂಟ್ವಾಳ ಸಿಡಿಪಿಒ ಮಲ್ಲಿಕಾ ಮತ್ತು ವಿಟ್ಲ ಸಿಡಿಪಿಒ ಸುಧಾ ಜೋಶಿ ಉಪಸ್ಥಿತರಿದ್ದರು.

