ಬಂಟ್ವಾಳ: ದೇಶ ತಾಂತ್ರಿಕ ಬದುಕಿಗೆ ಮಾರ್ಪಡಾಗಿದ್ದರು ಕೂಡಾ ಕೃಷಿಯಿಂದ ಮಾತ್ರ ಸ್ವಾಭಿಮಾನದ ಬದುಕು ಸಾಧ್ಯ ಎಂದು ಶ್ರೀ ಧರ್ಮಸ್ಥಳ ಗ್ರಾ.ಯೋಜನೆಯ ಕೊಡಗು ಜಿಲ್ಲಾ ನಿದೇರ್ಶಕ ಸೀತಾರಾಮ ಶೆಟ್ಟಿ ಹೇಳಿದರು.
ಅವರು ತೋಟಗಾರಿಕಾ ಇಲಾಖೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋಜನೆಯ ವತಿಯಿಂದ ಧರ್ಮಸ್ಥಳ ಕಲ್ಯಾಣ ಮಂಟಪ ಬಂಟ್ವಾಳದಲ್ಲಿ ನಡೆದ ಕೈತೋಟ ಮತ್ತು ತಾರಸಿ ತೋಟಗಳ ಉತ್ತೇಜನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಆರೋಗ್ಯವಂತ ಬದುಕು ಮತ್ತು ನೆಮ್ಮದಿಯ ಬದುಕು ನಡೆಸಲು ಅದು ಕೃಷಿಯಿಂದ ಮಾತ್ರ ಸಾಧ್ಯ, ಈ ಹಿನ್ನಲೆಯಲ್ಲಿ ಗ್ರಾಮಾಭಿವೃದ್ದಿ ಯೋಜನೆ ಕೃಷಿಗೆ ಹೆಚ್ಚು ಉತ್ತೇಜನ ನೀಡುತ್ತಿದೆ ಎಂದರು. ಕಾರ್ಯಕ್ರಮವನ್ನು ಕೃಷಿಕ ಪಧ್ಮನಾಭ ಕೊಟ್ಟಾರಿ ಉದ್ಘಾಟಿಸಿದರು. ವೇದಿಕೆಯಲ್ಲಿ ತೋಟಗಾರಿಕಾ ಉಪ ನಿದೇರ್ಶಕ ಸಂಜೀವ ನ್ಯಾಕ, ಯೋಜನಾಧಿಕಾರಿ ಸುನಿತಾ ನಾಯಕ್, ಯೋಜನೆಯ ಬಂಟ್ವಾಳ ವಲಯ ಅಧ್ಯಕ್ಷ ನಾಗೇಶ್, ಬೆಂಗಳೂರು ಸಂಪನ್ಮೂಲ ಸಂಸ್ಥೆಯ ಕಾರ್ಯದಶರ್ಿ ಕಾಳೇಗೌಡ ಮತ್ತು ಭಾರತಿ ಚೌಟ ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಸೌಮ್ಯ ಸ್ವಾಗತಿಸಿ ನವ್ಯ ವಂದಿಸಿದರು. ಕೃಷಿ ಅಧಿಕಾರಿ ನಾರಾಯಣ ಕಾರ್ಯಕ್ರಮ ನಿರೂಪಿಸಿದರು.
