.ಕುಪ್ಪೆಪದವು :ಬಡವರ ರಕ್ತ ಹೀರಿ ಬೆಳೆದಿರುವ ಬಂಡವಾಳ ಶಾಹಿಗಳಿಂದ ಸ್ಥಾಪಿತ್ಸಲ್ಪಟ್ಟಿರುವ ಮೈಕ್ರೋಫೈನಾನ್ಸ್ ಗಳು ಬಡವರನ್ನು ಸುಲಿಗೆ ಮಾಡುತ್ತಿದ್ದು .ಇಂತಹ ಮೈಕ್ರೋಫೈನಾನ್ಸ್ ಗಳನ್ನು ಒದ್ದೋಡಿಸುವವರೆಗೆ ಹೋರಾಡುತ್ತೇವೆ. ಎಂದು ದ .ಕ ಜಿಲ್ಲಾ ಋಣ ಮುಕ್ತ ಹೋರಾಟ ಸಮಿತಿಯ ಅಧ್ಯಕ್ಷ .ಬಿ ಎಂ .ಭಟ್ ಹೇಳಿದ್ದಾರೆ .ಅವರು .ದಕ್ಷಿಣಕನ್ನಡ ಜಿಲ್ಲಾ ಋಣಮುಕ್ತ ಹೋರಾಟ ಸಮಿತಿಯ ಆಶ್ರಯದಲ್ಲಿ .ಕುಪ್ಪೆಪದವು ಋಣಮುಕ್ತ ಹೋರಾಟ ಸಮಿತಿಯ ನೇತೃತ್ವದಲ್ಲಿ ಕುಪ್ಪೆಪದವಿನ ಕಾಡಕ್ಕೇರಿಯಲ್ಲಿ ಮಂಗಳವಾರ ನಡೆದ ‘ಸಾಲ ಸಂತ್ರಸ್ತ ಮಹಿಳೆಯರ ಹಾಗು ಪ್ರಜ್ಞಾವಂತ ನಾಗರಿಕರಿಂದ .ಬಡ ಜನರ ಸಾಲ ಮನ್ನಾಕ್ಕೆ ಆಗ್ರಹಿಸಿ ನಡೆದ ಬ್ರಹತ್ ಜನಜಾಗ್ರತಿ ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು .ರಾಷ್ಟ್ರೀಕೃತ ಬ್ಯಾಂಕುಗಳು ಬಡವರಿಗೆ ಸಾಲ ನೀಡಲು ಸತಾಯಿಸಿದ ಕಾರಣಕ್ಕೆ ಬಡವರು ಸುಲಭವಾಗಿ ಸಾಲ ನೀಡುವ ಇಂತಹ ಮೈಕ್ರೋಫೈನಾನ್ಸ್ ಗಳಿಗೆ ಮೊರೆಹೋದರು. ಆದರೆ ಅವರು ಕೇವಲ ಆಧಾರ್ ಕಾರ್ಡಿನ ಆಧಾರದಲ್ಲಿ ಸಾಲ ನೀಡಿ ಕಾನೂನಿಗಿಂತ ಅಧಿಕ ಬಡ್ಡಿವಿಧಿಸುವ ಮೂಲಕ ಬಡವರನ್ನು ಸುಲಿಗೆ ಮಾಡುತ್ತಿವೆ .ಸಣ್ಣವ್ಯವಹಾರಗಳಿಗೆ ಅನುಮತಿ ಪಡೆದುಕೊಂಡು ಕೋಟಿಗಟ್ಟಲೆ ವ್ಯವಹಾರ ನಡೆಸುತ್ತಿವೆ .ಬಡವರಿಗೆ ನೀಡಿರುವ ಸಾಲವನ್ನು ದಬ್ಬಾಳಿಕೆಯ ಮೂಲಕ ವಸೂಲಿಗೆ ಮುಂದಾದರೆ ಕಾನೂನು ಹೋರಾಟವೂ ಸೇರಿದಂತೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು .
ಬೆಳ್ತಂಗಡಿ ತಾಲೂಕು ಸಿ ಐ ಟಿ ಯು ಸಮಿತಿಯ ಅಧ್ಯಕ್ಷರು ಯಲ್ .ಮಂಜುನಾಥ್ .ಕಾರ್ಯದರ್ಶಿ ಲೋಕೇಶ್ ಕುದ್ಯಾಡಿ .ಬೆಳ್ತಂಗಡಿ ತಾಲೂಕು ಋಣಮುಕ್ತ ಹೋರಾಟ ಸಮಿತಿಯ ಅಧ್ಯಕ್ಷರಾದ ಸಂತೋಷ್ ನಿನ್ನಿಕಲ್ಲು .ಕಾರ್ಯದರ್ಶಿ ಕೇಶವ ಬಲ್ಯ .ದಲಿತ ಸಂಘರ್ಷ ಸಮಿತಿ (ರಿ )ಅಂಬೇಡ್ಕರ್ ವಾದ .ಬೆಳ್ತಂಗಡಿ ಇದರ ಸಂಚಾಲಕರಾದ ನೇಮಿರಾಜ್ ಕಿಲ್ಲೂರು .ಬಹುಜನ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ದಾಸಪ್ಪಎಡಪದವು .ದ .ಕ .ಜಿಲ್ಲಾ ವಿದ್ಯಾರ್ಥಿ ಸೋಷಿಯಲ್ ಎಜುಕೇಷನ್ ಸೊಸೈಟಿಯ ನಿರ್ದೇಶಕ ಶ್ರೀನಿವಾಸ್ .ಯಂ ಯಸ್ .ಬಿ ಯಸ್ ಪಿ ಪಕ್ಷದ ಸಂಯೋಜಕ ಗೋಪಾಲ್ ಮುತ್ತೂರು .ದಲಿತ ಮುಖಂಡ ಹರಿಯಪ್ಪ ಮುತ್ತೂರು ಸಮಾವೇಶವನ್ನುದ್ದೇಶಿಸಿ ಮಾತನಾಡಿದರು ಅಹಮ್ಮದ್ ಬಾವ ನಡುಪಲ್ಲ ಅಥಿತಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು .ಕುಪ್ಪೆಪದವು ಋಣಮುಕ್ತ ಹೋರಾಟ ಸಮಿತಿಯ ಅಧ್ಯಕ್ಷರು ಮಹಮ್ಮದ್ ಷರೀಫ್ .ರಫೀಕ್ ಮಂಗ್ಲಿಚಾರು .ಮುಂತಾದವರು ಉಪಸ್ಥಿತರಿದ್ದರು .ನಿತಿನ್ ಮುತ್ತೂರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು


