ಕೈಕಂಬ : ರಾಷ್ಟ್ರೀಯ ಹೆದ್ದಾರಿ ೧೬೯ರ ಕುಲಶೇಖರದಿಂದ-ಮೂಡಬಿದ್ರಿಯವರೆಗೆ ರಸ್ತೆ ಸಂಪೂರ್ಣ ಹೊಂಡಾಗುಂಡಿಯಾಗಿದ್ದು, ವಾಹನ ಸಂಚಾರ ತೀರಾ ಭೀತಿದಾಯಕವಾಗಿದೆ. ನ. ೭ರಂದು ಪ್ರಥಮ ಹಂತದಲ್ಲಿ ಹೆದ್ದಾರಿಯ ಗುರುಪುರ ಸೇತುವೆಯ ಮೇಲಿನ ಬೃಹತ್ ಹೊಂಡ ಮುಚ್ಚಿ ದುರಸ್ತಿ ನಡೆಸುವ ಕಾರ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಈ ಭಾಗದ ವಾಹನ ಸಂಚಾರ ನಿಷೇದಿಸಿ, ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.gur-nov-5-sethuve honda-3

ವಾಹನ ಸಂಚಾರ ನಿರ್ಬಂಧ :

ಭಾರೀ ಮಳೆಯಿಂದ ಹೆದ್ದಾರಿಯಲ್ಲಿರುವ ಫಲ್ಗುಣಿ ನದಿಗೆ ಅಡ್ಡಲಾಗಿರುವ ಹಳೆ ಸೇತುವೆಯ ಮೇಲ್ಭಾಗದ ಡಾಮರು ಕಿತ್ತು ಹೋಗಿ ಭಾರೀ ಹೊಂಡಗಳು ಸೃಷ್ಟಿಯಾಗಿವೆ. ಸದ್ಯ ಹೆದ್ದಾರಿ ವಾಹನ ಸಂಚಾರಕ್ಕೆ ಯೋಗ್ಯವಲ್ಲ ಎಂಬುದು ಮಂಗಳೂರಿನಲ್ಲಿರುವ ರಾಷ್ಟ್ರೀಯ ಹೆದ್ದಾರಿ ವಿಭಾಗ ಹೇಳಿಕೊಂಡಿದೆ. ಈ ಕಾರಣದಿಂದಲೇ ವಿಭಾಗವು ಡೀಸಿಯವರಿಗೆ ಮನವಿ ಮಾಡಿಕೊಂಡಂತೆ ನ. ೭ರಂದು ಸೇತುವೆ ಮೇಲೆ ಸಂಪೂರ್ಣ ಡಾಮರು ಅಳವಡಿಸುವ ಕಾಮಗಾರಿ ನಡೆಯಲಿದ್ದು, ಅಂದು ಈ ಭಾಗದಲ್ಲಿ ಬೆಳಿಗ್ಗೆ ೬ರಿಂದ ಸಂಜೆ ೬ರವರೆಗೆ ಸಂಪೂರ್ಣ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ಹೆದ್ದಾರಿ ವಿಭಾಗದ ಪ್ರಕಟಣೆ ತಿಳಿಸಿದೆ.

ಕಾವೂರಿನ ಮೊಗರೋಡಿ ಕನ್‌ಸ್ಟçಕ್ಷನ್ ಕಂಪೆನಿಯು ಗುತ್ತಿಗೆಯಾಧರಿಸಿ ಡಾಮರು ಅಳವಡಿಸುವ ಕಾಮಗಾರಿ ನಡೆಸಲಿದೆ. ಈ ಸಂದರ್ಭದಲ್ಲಿ ಮೂಡುಬಿದ್ರೆಯಿಂದ ಮಂಗಳೂರು ಕಡೆಯ ವಾಹನಗಳು ಕೈಕಂಬ-ಬಜ್ಪೆ-ಮರವೂರು ಸೇತುವೆ ರಸ್ತೆ ಮೂಲಕ ಮಂಗಳೂರು ಹಾಗೂ ಕೈಕಂಬ-ಪೊಳಲಿ-ಬಿ ಸಿ ರೋಡ್ ಮೂಲಕ ಮಂಗಳೂರಿಗೆ ತಲುಪುವುದು.

ಮಂಗಳೂರಿನಿಂದ ಮೂಡಬಿದ್ರೆ ಕಡೆಗೆ ಸಾಗುವ ವಾಹನಗಳು ಮಂಗಳೂರಿನಿಂದ ಮರವೂರು ಸೇತುವೆ-ಬಜ್ಪೆ-ಗುರುಪುರ ಕೈಕಂಬ-ಮೂಡಬಿದ್ರೆ ರಸ್ತೆ ಮೂಲಕ ಮುಂದುವರಿಯಲಿವೆ.

By suddi9

Leave a Reply

Your email address will not be published. Required fields are marked *