ಗುರುಪುರ :ನಿತ್ಯ ಬಳಕೆ ಮಾಡುವ ಪ್ಲಾಸ್ಟಿಕ್ ಚೀಲಗಳು, ನೀರಿನ ಬಾಟಲಿಗಳು ಮತ್ತಿತರ ವಸ್ತುಗಳು ನಮ್ಮ ಭೂಮಿಯನ್ನು ಮಲೀನ ಮಾಡುತ್ತಿದ್ದು , ಜಲ ಮೂಲವನ್ನು,ಜಲಚರಗಳಿಗೆ  ಮಾರಕವಾಗುತ್ತಿದೆ. ಇದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ಲಾಸ್ಟಿಕ್ ನಿಷೇಧ ಮುಂದಾಗಿದ್ದಾರೆ.ಜನತೆ ಮತ್ತು ವಿದ್ಯಾರ್ಥಿ  ಸಮುದಾಯ ಪ್ಲಾಸ್ಟಿಕ್ಕನ್ನು ಬಳಕೆ ಮಾಡುವುದಿಲ್ಲವೆಂದು  ಪ್ರತಿಜ್ಞೆ ತೊಡಬೇಕಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ  ಸುನಿಲ್ ಎಸ್ ದೇವೂಧರ್ ಹೇಳಿದರು.
IMG-20190919-WA0069
ಬಿಜೆಪಿ ಮಂಗಳೂರು ನಗರ ಉತ್ತರ ಇದರ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆ ಪ್ರಯುಕ್ತ ಸೇವಾ ಸಪ್ತಾಹ ಸರಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಪ್ಲಾಸ್ಟಿಕ್ ಮೊದಲು ನಾವೇ ಬಳಕೆಯನ್ನು ನಿಲ್ಲಿಸೋಣ ಬೇಡಿಕೆ ಇಲ್ಲದೆ ಹೋದಲ್ಲಿ ಪ್ಲಾಸ್ಟಿಕ್ ನಿರ್ಮಾಣದ ಕಂಪನಿಗಳು ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತವೆ.ಸಮುದ್ರದಲ್ಲಿನ ಮೀನು ಸಹಿತ ಜಲಚರಗಳಿಗೆ ಅಪಾಯವಿದೆ. ಭೂಮಿ ಪ್ಲಾಸ್ಟಿಕ್ ವಸ್ತುಗಳಿಂದ ರಕ್ಷಿಸ ಬೇಕಾದ ಸ್ವಯಂ ನಿಯಂತ್ರಣ ನಮ್ಮಿಂದಲೇ ಆರಂಭವಾಗಲಿ ಎಂದರು.
IMG-20190919-WA0070
ಪ್ರಧಾನಿ ನರೇಂದ್ರ ಮೋದಿಯವರು ತಮಗೆ ಸಿಕ್ಕಿದ ಸ್ಮರಣಿಕೆಗಳನ್ನು ಏಲಂ ಮಾಡುವ ಮೂಲಕ ಅದರಿಂದ ಬಂದ ಹಣವನ್ನು ಗಂಗಾ ಶುದ್ಧ ಅಭಿಯಾನಕ್ಕೆ ಬಳಕೆ ಮಾಡಲಿದ್ದಾರೆ.ಜಲಸಂರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿಯವರು ಎಷ್ಟು ಮಹತ್ವ ನೀಡುತ್ತಿದ್ದಾರೆ ಎಂದು ಇದರಿಂದ ತಿಳಿಯುತ್ತದೆ ಎಂದರು. ಗುಜರಾತಿನಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ವಿದ್ಯಾರ್ಥಿನಿಯರು ಶಾಲೆಗೆ ಬರುವಂತಾಗಲು ಲಕ್ಷಾಂತರ ಶೌಚಾಲಯ ಶೌಚಾಲಯಗಳನ್ನು ಶಾಲೆಗಳಲ್ಲಿ ಕಟ್ಟಿಸಿದರು.ಇದರಿಂದ ಹೆಣ್ಣುಮಕ್ಕಳು ಶಿಕ್ಷಣ ಪಡೆಯುವ ಸಂಖ್ಯೆಯಲ್ಲಿ ಹೆಚ್ಚಳವಾಯಿತು ಎಂದರು.
IMG-20190919-WA0069
ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಎಲ್ಲಾ ಕ್ಷೇತ್ರಕ್ಕೂ ಹೆಚ್ಚಿನ ಒತ್ತು ನೀಡಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.ಮಹಿಳೆಯರು ಸ್ವಂತ ಕಾಲ ಮೇಲೆ ನಿಲ್ಲಲು ಮುದ್ರ ಯೋಜನೆಯ ಸಾಲದ ಅಭಿಯಾನವನ್ನು ಕೌಶಲ್ಯ ತರಬೇತಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಆರ್ಥಿಕ ಸಾಮಥ್ರ್ಯವನ್ನು ಪಡೆಯುವಂತಾಗಲು ಶ್ರಮ ವಹಿಸಿದ್ದಾರೆ ಎಂದರು. ಕಾರ್ಯಕ್ರಮದ  ಅಧ್ಯಕ್ಷತೆಯನ್ನು ಶಾಸಕ ಡಾ. ಭರತ್ ಶೆಟ್ಟಿ ವಹಿಸಿದ್ದರು.
IMG-20190919-WA0068
ಜನ್ಮದಿನಾಚರಣೆ ಸಪ್ತಾಹ ಸರಣಿ ಕಾರ್ಯಕ್ರಮದ ಸಂಚಾಲಕ ಕ್ಯಾಪ್ಟನ್ ಬ್ರಿಜೇಶ್ ಚೌಟ,ಮಹಿಳಾ ಪಾಲಿಟೆಕ್ನಿಕ್ ಇದರ ಪ್ರಾಂಶುಪಾಲೆ ಕಲಾವತಿ ಕಾಮತ್,ಎನ್ ಎಸ್ ಎಸ್ ಅಧಿಕಾರಿ ಅಶ್ವಿನಿ ಎಂಎಸ್, ಬಿಜೆಪಿ ಪದಾಧಿಕಾರಿಗಳು,ಮುಖಂಡರು, ಪಾಲಿಟೆಕ್ನಿಕ್ನ ಎನ್ಎಸ್ಎಸ್ ವಿಭಾಗದ ವಿದ್ಯಾರ್ಥಿನಿಯರು ಮತ್ತಿತರರು ಉಪಸ್ಥಿತರಿದ್ದರು. ಮಂಗಳೂರು ಉತ್ತರ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ  ಅಶೋಕ ಕೃಷ್ಣಾಪುರ  ಸ್ವಾಗತಿಸಿದರು.  ಪ್ರಶಾಂತ ಪೈ ಕಾರ್ಯಕ್ರಮ ನಿರೂಪಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ನಿರ್ಮಿತಿ ಕೇಂದ್ರದ ನಿರ್ಧೇಶಕ ರಾಜೇಂದ್ರ ಕಲ್ಬಾವಿ ವಿದ್ಯಾರ್ಥಿಗಳಿಗೆ ಜಲ ಸಂರಕ್ಷಣೆ ಕುರಿತು ಮಾಹಿತಿಯನ್ನು ನೀಡಿದರು.

By Suddi9

Leave a Reply

Your email address will not be published. Required fields are marked *