ಕೈಕಂಬ:ಮಳಲಿ ಸರಕಾರಿ ಸಂಯುಕ್ತ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್‍ಗಳನ್ನು ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಸ್ಯಾಂಡಲ್‍ಗಳನ್ನು ಶಾಸಕ ಡಾ.ವೈ ಭರತ್ ಶೆಟ್ಟಿ ವಿತರಿಸಿದರು.
ಜಿ.ಪಂಚಾಯತ್ ಸದಸ್ಯ ಯು.ಪಿ ಇಬ್ರಾಹಿಂ, ತಾ.ಪಂ.ಸದಸ್ಯ ಸುನೀಲ್ ಜಿ, ಗಂಜಿಮಠ ಪಂ.ಅಧ್ಯಕ್ಷೆ ಮಾಲತಿ, ಸದಸ್ಯರಾದ ಜಯಾನಂದ ಕುಳಾಲ್, ಮಾಧವ ಕಾಜಿಲ, ಬೂಬ ಪೂಜಾರಿ, ರಝಾಕ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಉಮರಬ್ಬ, ಮುಖಂಡರಾದ ಸೋಹನ್ ಅಧಿಕಾರಿ, ಶಾಲಾ ಮುಖ್ಯ ಶಿಕ್ಷಕಿ ಹಾಗೂ ಶಿಕ್ಷಕರು ಹಾಜರಿದ್ದರು.
