ದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗ್ಯಾಸ್ ಬೆಲೆಯೇರಿಕೆಯಲ್ಲಿ ನಡೆದಿರುವ ಅವ್ಯವಹಾರಸಂಬಂಧಪಟ್ಟಂತೆ ಪೆಟ್ರೋಲಿಯಂ ಸಚಿವ ವೀರಪ್ಪ ಮೊಲಿ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶ ನೀಡಿರುವಂತೆ ಎಪ್ರಿಲ್ 1ರಿಂದ ಅನಿಲ ದರಗಳನ್ನು ಮತ್ತಷ್ಟು ಏರಿಸುವ ಬಗ್ಗೆ ಮೊಲಿ ಸೂಚನೆ ನೀಡಿದ್ದಾರೆ.moily
ಎಪ್ರಿಲ್ 1ರಿಂದ ಅನಿಲ ಬೆಲೆಯೇರಿಕೆ ಮಾಡುವುದು ನಿಶ್ಚಿತ ಆ ಬಗ್ಗೆ ಎರಡು ಮಾತಿಲ್ಲ ಎಂದು ಹೇಳಿರುವ ಮೊಲಿ, ಕೇಜ್ರಿವಾಲ್ ತನ್ನ ವಿರುದ್ಧ ಆದೇಶಿಸಿರುವ ಎಫ್ಐಆರ್ ಅಸಂವಿಧಾನಿಕ ಎಂದು ಹೇಳಿದರು. ಅನಿಲ ದರವನ್ನು ಏರಿಸಿರುವ ಕಾರಣ ವೀರಪ್ಪ ಮೊಲಿ, ರಿಲಾಯನ್ಸ್ ಇಂಡಸ್ಟ್ರೀಸ್ನ ಮುಖ್ಯಸ್ಥ ಮುಖೇಶ್ ಅಂಬಾನಿ, ಮಾಜಿ ಪೆಟ್ರೋಲಿಯಂ ಸಚಿವ ಮುರಳಿ ದಿಯೋರಾ ಮತ್ತು ಹೈಡ್ರೊಕಾರ್ಬನ್ಸ್ನ ಮಾಜಿ ಜನರಲ್ ಮ್ಯಾನೇಜರ್ ವಿ.ಕೆ. ಸಿಬಲ್ ವಿರುದ್ಧ ಎಫಫ್ಐಆರ್ ದಾಖಲಿಸುಂತೆ ಎಸಿಬಿಗೆ ಕೇಜ್ರಿವಾಲ್ ಆದೇಶಿಸಿದ್ದರು. ಆದರೆ ಈ ಕ್ರಮ ಅಸಂವಿಧಾನಿಕವಾಗಿದ್ದು ಅನಿಲ ದರ ಏರಿಕೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಹೇಳಿದ್ದಾರೆ.

By suddi9

Leave a Reply

Your email address will not be published. Required fields are marked *