ಬಂಟ್ವಾಳ:ವಿದ್ಯಾರ್ಥಿಗಳು ಪಾಠ, ಆಟದ ಜತೆಯಲ್ಲಿ ತಮ್ಮಲ್ಲಿರುವ ಕೌಶಲ್ಯ, ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ಗುರುತಿಸಿ ವೃದ್ಧಿಸುವ ಮೂಲಕ ತಮ್ಮ ವ್ಯಕ್ತಿತ್ವದ ವಿಕಸನಕ್ಕೆ ಪ್ರಯತ್ನಿಸಬೇಕು. ಎಂದು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪಾತ್ ವೇ ಲರ್ನಿಂಗ್ ಅಕಾಡೆಮಿ ನಿರ್ದೇಶಕ ಗೋಪಾಲ ಅಂಚನ್ ಹೇಳಿದರು.7ad5af01-dcd8-402d-92df-a0bd3ef50642

ಅವರು  ಶನಿವಾರ ಪಾತ್ ವೇ ಲರ್ನಿಂಗ್ ಅಕಾಡೆಮಿ, ವಾಮದಪದವು ಸರಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಬಿ.ಸಿ.ರೋಡಿನ ಲೈಫ್ ಸ್ಕಿಲ್ ಟ್ರೈನಿಂಗ್ ಸೆಂಟರ್ ಆಶ್ರಯದಲ್ಲಿ  ” ನನ್ನ ಕನಸು” ಎಂಬ ಜೀವನ ಶಿಕ್ಷಣ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಾಗಾರದ ಕುರಿತು ವಾಮದಪದವು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನುದ್ಧೇಶಿಸಿ ಶ್ರೇಷ್ಠ ಚಿಂತನೆ ಮತ್ತು ಶ್ರೇಷ್ಠ ಕನಸುಗಳೊಂದಿಗೆ ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಶ್ರೀಧರ್ ಎಚ್.ಜಿ, ಉಪನ್ಯಾಸಕಿ ಸುಶೀಲಾ, ಬಿ.ಸಿ.ರೋಡು ಲೈಫ್ ಸ್ಕಿಲ್ ಟ್ರೈನಿಂಗ್ ಸೆಂಟರಿನ ಸಂಯೋಜಕಿ ಪ್ರತಿಮಾ ಜಿ.ಅಂಚನ್ ಉಪಸ್ಥಿತರಿದ್ದರು.ಉಪನ್ಯಾಸಕ ದಯಾನಂದ್ ಸ್ವಾಗತಿಸಿದರು.

By suddi9

Leave a Reply

Your email address will not be published. Required fields are marked *