ಬಂಟ್ವಾಳ: ವಿದ್ಯಾರ್ಥಿ ಜೀವನದಲ್ಲಿಯೇ ಓದುವಿಕೆಯನ್ನು ಮೈಗೂಡಿಸಿಕೊಂಡರೆ ಮಾತ್ರ ಉತ್ತಮ ಜ್ಞಾನವನ್ನು ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಗ್ರಂಥಾಲಯವನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು ಎಂದು ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ಶ್ರೇಣಿ ಗ್ರಂಥಪಾಲಕರಾದ ರಾಮ.ಕೆ ಹೇಳಿದರು. ಸಿದ್ದಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯ ವಿಭಾಗದಿಂದ ನಡೆದ ಗ್ರಂಥಾಲಯ ದಿನಾಚರಣೆಯಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಅವರು ಆಧುನಿಕ ಗ್ರಂಥಾಲಯದ ಪಿತಾಮಹರಾಗಿರುವ ಡಾ. ಎಸ್.ಆರ್ ರಂಗನಾಥನ್ ಇವರ ಸಾಧನೆ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸತ್ಯನಾರಾಯಣ ಭಟ್, ಇವರು ಮಾತನಾಡಿ ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವುದರ ಜೊತೆಗೆ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳನ್ನು ಓದುವುದರಿಂದ ಜ್ಞಾನ ವೃದ್ಧಿಸುತ್ತದೆ ಎಂದರು.
ಗ್ರಂಥಪಾಲಕರಾದ ಶ್ರೀನಿವಾಸ್ ಪ್ರಾಸ್ತಾವಿಕ ಮಾತನಾಡಿದರು. ಐಕ್ಯೂಎಸಿ ಸಂಚಾಲಕರಾದ ಸೌಮ್ಯ ಹೆಚ್.ಕೆ, ಉಪನ್ಯಾಸಕರಾದ ನಸೀಮಾ ಬೇಗಂ,ಎಸ್, ಹನುಮಂತಯ್ಯ ಜಿ.ಹೆಚ್, ದೇವಿಪ್ರಸಾದ್, ರಂಗನಾಥ್ ಉಪಸ್ಥಿತರಿದ್ದರು.
ಗ್ರಂಥಪಾಲಕರಾದ ಶ್ರೀನಿವಾಸ್ ಪ್ರಾಸ್ತಾವಿಕ ಮಾತನಾಡಿದರು. ಐಕ್ಯೂಎಸಿ ಸಂಚಾಲಕರಾದ ಸೌಮ್ಯ ಹೆಚ್.ಕೆ, ಉಪನ್ಯಾಸಕರಾದ ನಸೀಮಾ ಬೇಗಂ,ಎಸ್, ಹನುಮಂತಯ್ಯ ಜಿ.ಹೆಚ್, ದೇವಿಪ್ರಸಾದ್, ರಂಗನಾಥ್ ಉಪಸ್ಥಿತರಿದ್ದರು.
ವಿದ್ಯಾರ್ಥಿ ಗಳಾದ ಪ್ರಜ್ವಲ್ ಸ್ವಾಗತಿಸಿದರು. ಮೆಲ್ಡ್ರೀಯಾ ಡೀನ ಕ್ಯಾಸ್ತೆಲಿನೊ ಕಾರ್ಯ ಕ್ರಮ ನಿರೂಪಿಸಿದರು. ಸುಭಾಸ್ ಬಂಗೇರ ವಂದಿಸಿದರು.

