ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ ವಿಟ್ಲ ಬಿ ಒಕ್ಕೂಟದಲ್ಲಿ ಮಂಜುಷಾ ತಂಡವನ್ನು ವಲಯ ಮೇಲ್ವಿಚಾರಕ ರಮೇಶ್ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಉದ್ಘಾಟಿಸಿ ಮಾಹಿತಿ ನೀಡಿದರು.

ಪ್ರಬಂಧಕರಾಗಿ ರಮೇಶ್, ಸಂಯೋಜಕರಾಗಿ ಸ್ವಸ್ತಿಕ್, ಮತ್ತು ಕೋಶಾಧಿಕಾರಿಯಾಗಿ ಕಾರ್ತಿಕ್ ಇವರನ್ನು ಆಯ್ಕೆ ಮಾಡಲಾಯಿತು. ವಿಟ್ಲ ಬಿ ಒಕ್ಕೂಟದ ಅಧ್ಯಕ್ಷ ರಾಜೇಶ್ ಎ ದಾಖಲಾತಿ ಹಸ್ತಾಂತರಿಸಿದರು. ಸೇವಾಪ್ರತಿನಿಧಿ ಸರಿತಾ ಮತ್ತು ಮೋಹನ್ ಉಪಸ್ಥಿತರಿದ್ದರು.
