ವಿಟ್ಲ: ರಾಜ್ಯ ಕೇಂದ್ರ ಕಾರ್ಯಾಲಯ ಶಾಂತಿ ಗೃಹ ಅರಮನೆ ರಸ್ತೆ ಬೆಂಗಳೂರಿನಲ್ಲಿ 2018-19 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇಕಡಾ 95% ಕ್ಕಿಂತ ಹೆಚ್ಚು ಅಂಕಗಳಿಸಿ ಸ್ಕೌಟ್ಸ್ & ಗೈಡ್ಸ್ ವಿದ್ಯಾರ್ಥಿಗಳನ್ನು ರಾಜ್ಯಮಟ್ಟದಲ್ಲಿ ಅಭಿನಂದಿಸುವ ಕಾರ್ಯಕ್ರಮ ನಡೆಯಿತು.
ಸೈಂಟ್ ರೀಟಾ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಕುಮಾರಿ ವಿಶ್ಮಿತಾ ಸಾಂದ್ರ ವೇಗಸ್ ಇವರು 2018-19ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 611 ಅಂಕಗಳನ್ನು ಗಳಿಸಿ, ಗೈಡ್ಸ್ ವಿಭಾಗದಲ್ಲಿ ಅಭಿನಂದಿಸಲ್ಪಟ್ಟರು. ಸಂಸ್ಥೆಯು ಇವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಲಾಯಿತು.
