ವಿಟ್ಲ: ಅಂತಾರಾಷ್ಟ್ರೀಯ ಒಕಿನವನ್ ಗೊಜು-ರ್ಯು ಕರಾಟೆ ಮಲೈಷಿಯಾ ಆಶ್ರಯದಲ್ಲಿ ಮಲೈಷಿಯಾದಲ್ಲಿ ಶನಿವಾರ ನಡೆದ 2019ನೇ ಸಾಲಿನ ಅಂತಾರಾಷ್ಟ್ರೀಯ ಕರಾಟೆ- ಡು ಓಪನ್ ಚಾಂಪಿಯನ್ ಶಿಪ್ ನಲ್ಲಿ ವಿಟ್ಲ ಬ್ರಾಣಪಾದೆಯ ಅಯ್ಯಪ್ಪ ಮೂಲ್ಯ ಹಾಗೂ ಶಾಲಿನಿ ದಂಪತಿಗಳ ಪುತ್ರಿ ಕು| ನಿವೇದಿತಾ ರವರು ‘Kumite‘ ಇವೆಂಟ್ ನಲ್ಲಿ ದ್ವಿತೀಯ ಮೆಡಲ್ ಹಾಗೂ ‘Kata’ ಇವೆಂಟ್ ನಲ್ಲಿ ತೃತೀಯ ಮೆಡಲ್ ಗಳಿಸಿದ್ದು, ರಾಷ್ಟ್ರಕ್ಕೆ ಹೆಮ್ಮೆ ತಂದುಕೊಟ್ಟಿದ್ದಾರೆ.
ಈ ಹಿಂದೆಯೂ ಹಲವಾರು ಪ್ರಶಸ್ತಿ ಮೆಡಲ್ ಗಳನ್ನು ತಮ್ಮ ಮುಡಿಗೇರಿಸಿಕೊಂಡ ಇವರು ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದರು. ವಿಟ್ಲ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷ ಪಿಯುಸಿ ಯಲ್ಲಿ ವ್ಯಾಸಂಗ ಮಾಡುತ್ತಿರುವ ನಿವೇದಿತಾ ಮಾಧವ ಅಳಿಕೆಯವರಿಂದ ಕರಾಟೆ ತರಬೇತಿ ಪಡೆಯುತ್ತಿದ್ದಾರೆ. ಈ ಹಿಂದೆ ನಡೆದ ಹಲವಾರು ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಚಿನ್ನ, ಬೆಳ್ಳಿ ಮೆಡಲ್ ಪಡೆದಿದ್ದರು.

