ವಿಟ್ಲ ; ಜೆಸಿಐ ವಿಟ್ಲ ಘಟಕದ ವತಿಯಿಂದ “ಆಟಿಡೊಂಜಿ ದಿನ “-ವಿವಿಧ ತಿಂಡಿ ತಿನಿಸುಗಳ ಹಬ್ಬ…. ಈ ಕಾರ್ಯಕ್ರಮದ ಉದ್ಘಾಟನೆ ಯನ್ನು ವಲಯಾಧ್ಯಕ್ಷರಾದ ಅಶೋಕ್ ಚೂOತಾರುರವರು ಗಜಾನನ ಸಭಾಭವನದಲ್ಲಿ ನೆರವೇರಿಸಿದರು. ಜೆಸಿಐ ವಿಟ್ಲ ಘಟಕದ ಅಧ್ಯಕ್ಷ ರಾದ ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ವಲಯ ತರಬೇತುದಾರರಾದ ರಮೇಶ್ ಬಿ ಕೆ, ಆಟಿ ತಿಂಗಳ ಮಹತ್ವವನ್ನು ತಿಳಿಸಿದರು. ವಲಯ ಉಪಾಧ್ಯಕ್ಷರಾದ ರೋಯನ್ ಉದಯ್ ಕ್ರಾಸ್ತ, ವಲಯಾಧಿಕಾರಿ ಬಾಬು ಕೆ ವಿ ವಲಯ ಹದಿನೈದರ ಪ್ರಶಾಂತ್ ರೈ, ಅಧ್ಯಕ್ಷೆ ಮಲ್ಲಿಕಾ ಬಿ ಎಸ್ ಹಾಗೂ ಜೆ ಸಿ ಕುಟುಂಬದ ಸದಸ್ಯರು ಭಾಗವಹಿಸಿದ್ದರು.

