ವಿಟ್ಲ:ಭಾರತ್ ಸ್ಕೌಟ್ಸ್ & ಗೈಡ್ಸ್ ಸ್ಥಳೀಯ ಸಂಸ್ಥೆ ವಿಟ್ಲ. ಇದರ ಮಹಾ ಸಭೆಯು ದಿನಾಂಕ: 26-08-2019ಬುಧವಾರ ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅತಿಥಿಯಾದ ಶ್ರೀ ಎನ್.ಜಿ ಮೋಹನ್‍ರವರು ನೈತಿಕ ಮೌಲ್ಯ, ನಾಯಕತ್ವಗುಣ, ಮಕ್ಕಳಲ್ಲಿ ಬೆಳೆಸುವಲ್ಲಿ ಸ್ಕೌಟ್ಸ್ , ಗೈಡ್ಸ್ ಶಿಕ್ಷಕರ ಪಾತ್ರ ಮಹತ್ತರವಾದದ್ದು ಎಂದು ಹೇಳಿದರು.

SHV_1150ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾಕರ ಶೆಟ್ಟಿ ದಂಬೆಕಾನ ವಹಿಸಿದ್ದರು.ಅತಿಥಿಗಳಾದ ಶ್ರೀರಾಮಶೇಷ ಶೆಟ್ಟಿ, ಶ್ರೀ ಜಿ.ಕೆ ಭಟ್, ಶ್ರೀ ಎಂ.ಜೆ ಕಜೆ, ಶ್ರೀ ಅನಂತಕೃಷ್ಣ ಹೆಬ್ಬಾರ್, ಶ್ರೀ ಸುದರ್ಶನ ಪಡಿಯಾರ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ & ಗೈಡ್ಸ್ ಸ್ಥಳೀಯ ಸಂಸ್ಥೆ ವಿಟ್ಲದ ಕಾರ್ಯದರ್ಶಿ ನಾರಾಯಣ ನಾಯಕ್ ಸ್ವಾಗತಿಸಿದರು. ಜಿಲ್ಲಾ ಪ್ರತಿನಿಧಿ ಶ್ರೀ ವಿಶ್ವನಾಥ ಗೌಡ ವಂದಿಸಿದರು.ಶ್ರೀ ನರಸಿಂಹ ಭಟ್ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *