ಗುರುಪುರ : ಗುರುಪುರ ಮೂಳೂರು ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದಲ್ಲಿ ಜು. 13ರಂದು ದೈವಗಳಿಗೆ ಪುನರ್ ಪ್ರತಿಷ್ಠಾಕಲಶಾಭಿಷೇಕ ಜರುಗಲಿದೆ.ಆ ಪ್ರಯುಕ್ತ ಜು. 12ರಂದು ಸಂಜೆ ವಾಸ್ತುಪೂಜೆ, ಭದ್ರಕ ಮಂಡಲ ಪೂಜೆ, ದಿಕ್ಪಾಲಕ ಬಲಿ ಮುಂತಾದ ಪೂಜಾ ಕಾರ್ಯಕ್ರಮ ನಡೆಯಿತು. ಜು. 13ರಂದು ಬೆಳಿಗ್ಗೆ ಸಂಜೀವಿನಿ ಮಹಾ ಮೃತ್ಯುಂಜಯ ಹೋಮ, ದೈವಗಳಿಗೆ ಕಲಶಾಭಿಷೇಕ, ಶಿಖರ ಕಲಶ ನಡೆಯಲಿದೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.
