ಪೊಳಲಿ : ಸ್ಯಾಂಡಲ್ವುಡ್ ನಟ ವಿಜಯ್ ರಾಘವೇಂದ್ರ ಹಾಗೂ ಅವರ ಪತ್ನಿ ಸ್ಪಂದನಾ ಮಗ ಶನಿವಾರ ಬೆಳಿಗ್ಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
“ನಾನು ಚಿಕ್ಕವನಿದ್ದಾಗ ತಂದೆಯೊಂದಿಗೆ ಪೊಳಲಿಗೆ ಆಗಮಿಸಿದ್ದ ನೆನಪು. ಆದರೆ ಅದು ಅಷ್ಟಾಗಿ ನೆನಪಿಲ್ಲ. ಈ ದೇವಸ್ಥಾನ ಹಾಗೂ ದೇವಸ್ಥಾನದ ಅಧಿದೇವತೆ ಅಮ್ಮ(ಶ್ರೀ ರಾಜರಾಜೇಶ್ವರೀ ದೇವಿ) ಭಕ್ತರ ಕಾಯುವವಳೆಂದು ನಾನು ತಿಳಿದಿದ್ದೇನೆ. ದೇವಸ್ಥಾನ ಅತ್ಯಂತ ಆಕರ್ಷಕವಾಗಿದೆ” ಎಲ್ಲರು ಇಲ್ಲಿಯ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದು ಪುಣಿತರಾಗಿ ಎಂದು ವಿಜಯ್ ರಾಘವೇಂದ್ರ ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಹೇಳಿದರು. 
ದೇವಸ್ಥಾನದ ಅರ್ಚಕ ಕೆ ರಾಮ ಭಟ್ ಪ್ರಸಾದ ನೀಡಿದರು. ಸುಬ್ರಾಯ ಕಾರಂತ, ಯಶವಂತ ಪೂಜಾರಿ ಪೊಳಲಿ, ಸಂತೋಷ ಕೊಡ್ಮಾಣ್, ನವೀನ್, ಸಂದೀಪ್,ಸೇಸಪ್ಪ ಹಾಗೂ ಸ್ಥಳೀಯ ನೂರಾರು ಭಕ್ತರು ಇದ್ದರು.




