ಕಿನ್ನಿಗೋಳಿ;ಮೂಲ್ಕಿ ಠಾಣಾ ವ್ಯಾಪ್ತಿಯ ಹಳೆಯಂಗಡಿ ಕದಿಕೆ ಬಳಿ ಮೂರು ದೈವಸ್ಥಾನ ಮತ್ತು ಎರಡು ಮನೆಗಳಿಗೆ ನುಗ್ಗಿ ನಗ ನಗದು ಕಳವುಗೈದು ಪರಾರಿಯಾದ ಘಟನೆ ನಡೆದಿದೆ. ಒಂದು ತಿಂಗಳ ಹಿಂದಿನಿಂದ ಈ ಪರಿಸರದಲ್ಲಿ ಸರಣಿ ಕಳವು ಆಗುತ್ತಿದೆ ಎಂದು ಸ್ಥಳಿಯರು ಹೇಳುತ್ತಿದ್ದಾರೆ.
ಕದಿಕೆಯ ಸಾಲ್ಯಾನ್ ಮೂಲಸ್ಥಾನ, ಸುವರ್ಣ ಮೂಲಸ್ಥಾನ, ಮೋಹನ್ ಸಾಲ್ಯಾನ್ ಕುಟುಂಬದ ಮನೆ, ದೈವಸ್ಥಾನ ಹಾಗೂ ಸಮೀಪದ ಅಬುಸಾಲಿ ಅವರ ಮನೆಗೆ ನುಗ್ಗಿ ಕಳವುಗೈದಿದ್ದಾರೆ.

ಕದಿಕೆ ಸಾಲ್ಯಾನ್ ಮೂಲಸ್ಥಾನದಲ್ಲಿ ಈ ವರ್ಷದ ಎಪ್ರಿಲ್ ತಿಂಗಳಲ್ಲಿ ದೊಡ್ಡ ಮಟ್ಟದಲ್ಲಿ ಬ್ರಹ್ಮಕಲಶೋತ್ಸವ ನಡೆದಿತ್ತು. ಹಲವು ದೈವಸ್ಥಾನ ದೇವಳಗಳಲ್ಲಿ ಹಾಗೂ ಜನನಿಬಿಡ ಸ್ಥಳಗಳಲ್ಲಿ ಸಿಸಿ ಕ್ಯಾಮಾರ ಅಳವಡಿಸಿದದಿರುವುದೇ ಇಂತಹ ಕಳ್ಳತನಕ್ಕೆ ಸುಗಮ ದಾರಿ ಮಾಡಿ ಕೊಟ್ಟ ಹಾಗಿದೆ. ಸಾಲ್ಯಾನ್ ಮೂಲ ಸ್ಥಾನದ ಮೂಲಮೈಸಂದಾಯ, ಪೊಸಪ್ಪೆ ವರ್ತೆ ಪಂಜುರ್ಲಿ ಗುಡಿಯ ಎರಡು ಬೆಳ್ಳಿಯ ಕಡ್ಸಲೆಗಳು, ಬೆಳ್ಳಿಯ ಮೂರ್ತಿ, ಎರಡು ಕಾಣಿಕೆ ಹುಂಡಿಯಲ್ಲಿದ್ದ ಹಣ, ಸಮೀಪದ ಮೋಹನ್ ಸಾಲ್ಯಾನ್ ಅವರ ಕುಟುಂಬದ ಬಂಗಾರದೇವಿ ಮನೆ ಕದಿಕೆ ವತೆ ಪಂಜುರ್ಲಿ ದೈವಸ್ಥಾನದ ದೈವದ ಬೆಳ್ಳಿಯ ಮೂರ್ತಿ ಕಳುವಾಗಿದೆ ಸಮೀಪದ ಮೋಹನ್ ಸಾಲ್ಯಾನ್ ಅವರ ಕುಟುಂಬದ ಮನೆಗೆ ನುಗ್ಗಿದ್ದರೂ ಕಳವು ಮಾಡಲು ಎನೂ ಸಿಕ್ಕಿಲ್ಲ.
ಸಮೀಪದ ಅಬುಸಾಲಿ ಅವರ ಮನೆಯ ಕಪಾಟು ಒಡೆದು ಕಪಾಟಿನಲ್ಲಿದ್ದ 30 ಸಾವಿರ ರೂಪಾಯಿ ನಗದು ದೋಚಿದ್ದಾರೆ. ಸುವರ್ಣ ಮೂಲಸ್ಥಾನದ ದೈವದ ಬೆಳ್ಳಿಯ ಕಡ್ಸಲೆ, ಬಂಗಾರದ ಕರಿಮಣಿ ಸರ ದೋಚಿದ್ದಾರೆ.
ಸಾಲ್ಯಾನ್, ಸುವರ್ಣ ಮತ್ತು ಅಮೀನ್ ಮೂಲಸ್ಥಾನಗಳಲ್ಲಿನ ಬೀಗ ಹಾಕಿರುವ ಸುಮಾರು 10 ಕಾಣಿಕೆ ಹುಂಡಿಗಳನ್ನು ಕದ್ದೊಯ್ದು ಸಮೀಪದ ಸಿಗಡಿ ಸಾಕಣಿಕೆ ಕೇಂದ್ರದ ಗದ್ದೆಯ ಬಳಿ ಹುಂಡಿಗಳನ್ನು ಒಡೆದು ಹಾಕಿ ಹಣವನ್ನು ದೋಚಿದ್ದಾರೆ.

ಶುಕ್ರವಾರ ರಾತ್ರಿ ಅಬುಸಾಲಿಯವರ ಮನೆಯವರು ಇಲ್ಲದ ಹೊತ್ತಿನಲ್ಲಿ ಕಳ್ಳತನವಾಗಿದ್ದು ಅಬುಸಾಲಿ ಮನೆಯವರು ತಡ ರಾತ್ರಿ ಮನೆಗೆ ಬಂದು ನೋಡಿದ್ದಾಗ ಪ್ರಕರಣ ಬೆಳಕಿಗೆ ಬಂದಿದ್ದು ಮೂಲಸ್ಥಾನಗಳಲ್ಲಿ ಕಳವುಗೈದ ಪ್ರಕರಣ ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಶನಿವಾರ ಬೆಳಿಗ್ಗೆ ಸುಮಾರು 9 ಗಂಟೆ ಸುಮಾರಿಗೆ ಮೂಲ್ಕಿ ಪೆÇೀಲಿಸರು ಕಳ್ಳತನ ನಡೆದ ಸಾಲ್ಯಾನ್ ಮೂಲಸ್ಥಾನ ಬಳಿ ಸ್ಥಳ ಪರಿಶೀಲನೆ ನಡೆಸುತ್ತಿದ್ದ ಸಂದರ್ಭ ಸಿಗಡಿ ಸಾಕಣಿಕೆಯ ಸ್ಥಳದ ಸಮೀಪದಲ್ಲಿ ಇಬ್ಬರು ಗೋಣಿ ಚೀಲದಲ್ಲಿ ಏನನ್ನೂ ತುಂಬಿಸಿ ದ್ವಿಚಕ್ರ ವಾಹನದಲ್ಲಿ ಹೋಗುವುದನ್ನು ಸ್ಥಳೀಯರು ಕಂಡಿದ್ದಾರೆ ಕೂಡಲೇ ಸಾಲ್ಯಾನ್ ಮೂಲಸ್ಥಾನದಲ್ಲಿ ಪರಿಶೀಲನೆ ನಡೆಸುತ್ತಿದ್ದ ಪೆÇೀಲಿಸರಿಗೆ ಮಾಹಿತಿ ನೀಡಿ ಸ್ಥಳೀಯರು ಮತ್ತು ಮುಲ್ಕಿ ಪೆÇೀಲಿಸರು ಹುಡುಕುವ ಪ್ರಯತ್ನ ಮಾಡಿದ್ದು ಅಷ್ಟರಲ್ಲಿ ಕಳ್ಳರು ಪರಾರಿಯಾಗಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ.
ಇಬ್ಬರು ಯುವಕರು ಸಿಗಡಿ ಸಾಕಣಿಕೆ ಕೇಂದ್ರಕ್ಕೆ ಹೋಗಿ 6 ಕಿಲೋ ಸಿಗಡಿ ಮೀನನ್ನು ಖರೀದಿಸಿ ನಂತರ ಗೋಣಿಯಲ್ಲಿ ಸಿಗಡಿಯನ್ನು ತುಂಬಿಸಿ, ಮತ್ತೊಂದು ಖಾಲಿ ಗೋಣಿ ಚೀಲವನ್ನು ಕೇಂದ್ರದವರಿಂದ ಪಡೆದಿದ್ದಾರೆ. ಈ ಯುವಕರು ಕಾಣಿಕೆ ಡಬ್ಬಿಯನ್ನು ಕದ್ದೊಯ್ದು ಯಾರಿಗೂ ಸಂಶಯ ಬರದ ರೀತಿಯಲ್ಲಿ ಖಾಲಿ ಗೋಣಿ ಚೀಲದಲ್ಲಿ ಹಣವನ್ನು ತುಂಬಿಸಿ ಸಿಗಡಿ ಮೀನಿನ ಗೋಣಿ ಚೀಲದೊಟ್ಟಿಗೆ ತೆಗೆದುಕೊಂಡು ಹೋಗಿರುವ ಸಾಧ್ಯತೆ ಮತ್ತು ಗುಮಾನಿ ಇದೆ ಎನ್ನಲಾಗಿದೆ. ಸಿಗಡಿ ಮೀನಿನ ಸಿಬ್ಬಂದಿಗಳ ಬಳಿ ಆ ಇಬ್ಬರು ಯುವಕರು ತಮ್ಮ ಮೊಬೈಲ್ ನಂಬರ್ ನೀಡಿದ್ದಾರೆ ಎನ್ನಲಾಗಿದೆ. ಸಮೀಪದ ಬಾರ್ ಒಂದರ ಸಿ.ಸಿ ಟಿವಿಯನ್ನು ಪರಿಶೀಲಿಸಿದ್ದು ಸ್ಥಳಕ್ಕೆ ಮೂಲ್ಕಿ ಪೆÇೀಲಿಸರು ಬೆರಳಚ್ಚು ತಜ್ಞರು ಮತ್ತು ಶ್ವಾನದಳದವರು ಆಗಮಿಸಿ ತನಿಖೆ ನಡೆಸಿದ್ದಾರೆ.

