ಕೈಕಂಬ:ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಪದವು ದಡ್ಡಿಕ್ರಾಸ್ ಧೂಮಚಡವು ಎಂಬಲ್ಲಿ ಮೇ.17ರಂದು ಮಾರಣಾಂತಿಕವಾಗಿ ಹೊಡೆದು ಸ್ಥಳೀಯವಾಗಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಯುವಕನ್ನು ಕೊಲೆಗೈದಿದ್ದ ಇಬ್ಬರು ಆರೋಪಿಗಳನ್ನು ಮಂಗಳವಾರ ಬಂಧಿಸಿದ್ದಾರೆ. ಮೇ. 17ರ ತಡರಾತ್ರಿ ಸ್ಥಳೀಯ ಎಡಪದವು ಪಲ್ಕೆ ನಿವಾಸಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ನವೀನ್ ಭಂಡಾರಿ ಎಂಬಾತನನ್ನು ಈ ಹಿಂದೆಯೂ ಇಂತಹುದೇ ಪ್ರಕರಣಗಳಲ್ಲಿ ಗುರುತಿಸಿಕೊಂಡಿದ್ದ ಎಡಪದವಿನವರೇ ಆದ ರಮೇಶ್ ಯಾನೆ ಪುಂಗು ಹಾಗೂ ನಿತ್ಯ ಯಾನೆ ನಿತ್ಯಾನಂದ ಎಂಬಾತನನ್ನು ಬಜಪೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.ಕೊಲೆಗೀಡಾಗಿದ್ದ ನವೀನ್ನ ಜತೆಗಿದ್ದ ಆತನ ಸ್ನೇಹಿತ ಅವಿನಾಶ್ ನೀಡಿದ್ದ ದೂರಿನ ಆಧಾರದಲ್ಲಿ ಇಬ್ಬರು ಅರೋಪಿಗಳನ್ನು ಬಂದಿಸಲಾಗಿದೆ.

ಎ.ಸಿ.ಪಿ. ಶ್ರೀನಿವಾಸ ಗೌಡ ಅವರ ನೇತೃತ್ವದ ರೌಡಿನಿಗ್ರಹದಳ ಹಾಗೂ ಬಜಪೆ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರ ನಿರ್ದೇಶನದಂತೆ ಕಾರ್ಯಚರಣೆ ನಡೆಸಲಾಗಿದೆ.ಎ.ಸಿ.ಪಿ ಹನುಮಂತರಾಯ, ಲಕ್ಷ್ಮೀಶ, ಎಸಿಪಿ ಶ್ರೀನಿವಾಸ ಗೌಡ ಬಜಪೆ ಇನ್ಸ್ಪೆಕ್ಟರ್ ಪರಶಿವ ಮೂರ್ತಿ, ರೌಡಿ ನಿಗ್ರಹದಳ ಹಾಗೂ ಬಜಪೆ ಪೊಲೀಶ್ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿದ ತಂಡದಲ್ಲಿದ್ದು ಖಚಿತ ಸುಳಿವಿನ ಆಧಾರದಲ್ಲಿ ಉಡುಪಿ ಜಿಲ್ಲೆ ಪಲಿಮಾರು ಎಂಬಲ್ಲಿ ಮೇ.28 ಮಂಗಳವಾರ ಬಂಧಿಸಲಾಗಿದ್ದು ಹಣಕಾಸು ವಿಚಾರವೇ ಕೊಲೆಗೆ ಕಾರಣ ಎಂದು ತನಿಖೆಯ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಎಂದು ಪೊಲೀಸ್ ಮೂಲಗಳು ತಿಳಿಸಿದೆ. ಅಲ್ಲದೆ ಆರೋಪಿಗಳು ಈಗಾಗಲೇ ಬಜಪೆ ಪೋಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ ಪಟ್ಟಿಯಲ್ಲಿದ್ದಾರೆ ಎನ್ನಲಾಗಿದೆ.

