ಗುರುಪುರ : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರವಾಗಿ ಗುರುಪುರದ ಕಲ್ಲಕಲಂಬಿ, ಬಡಕರೆ, ಚಿಲಿಂಬಿಗುಡ್ಡೆ, ನಡುಗುಡ್ಡೆ ಮತ್ತು ಕುಕ್ಕುದಕಟ್ಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿರುಸಿನ ಮತ ಯಾಚಿಸಿದರು.gur-apl-15-congress mata yachane-1

ಗುರುಪುರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಿ ಎಂ ಉದಯ ಭಟ್ ಮತ್ತು ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಸದಾಶಿವ ಶೆಟ್ಟಿ ಕಲ್ಲಕಲಂಬಿ, ಸದಸ್ಯೆ ಶೋಭಾ ನೇತೃತ್ವದ ತಂಡ ಮನೆಮನೆಗೆ ಭೇಟಿ ನೀಡಿ ಮತ ಯಾಚಿಸಿತು.

“ಕಳೆದ ಐದು ವರ್ಷದ ಅವಧಿಯಲ್ಲಿ ಹಲವು ಯೋಜನೆ ಪ್ರಕಟಿಸಿದ್ದೇವೆ ಎಂದು ಬಿಜೆಪಿಗರು ಬೊಗಳೆ ಬಿಡುತ್ತಿದ್ದರೂ, ಗ್ರಾಮೀಣ ಪ್ರದೇಶಕ್ಕೆ ಯಾವುದೇ ಜನಪರ ಯೋಜನೆಗಳು ತಲುಪಿಲ್ಲ. ಬಡಜನರ ಅನ್ನ ಕಸಿಯುವ ಯೋಜನೆಗಳು ಅನುಷ್ಠಾನಗೊಂಡಿವೆ. ಕಾರ್ಮಿಕ ವರ್ಗದ ಜನರಿಗೆ ಕೇಂದ್ರದಿಂದ ಯಾವುದೇ ಪ್ರಯೋಜನವಾಗಿಲ್ಲ. ಹಾಲಿ ಸಂಸದ ನಳಿನ್ ಈ ಕ್ಷೇತ್ರದಲ್ಲಿ ಎಷ್ಟು ಮತ್ತು ಯಾರ ಅಭಿವೃದ್ಧಿ ಮಾಡಿದ್ದಾರೆಂದು ಜನಸಾಮಾನ್ಯರಿಗೆ ಗೊತ್ತಿದೆ. ಆದ್ದರಿಂದ ಈ ಬಾರಿ ಮತದಾನದ ವೇಳೆ ಎಚ್ಚರ ವಹಿಸಿ” ಎಂದು ಉದಯ ಭಟ್ ಹಾಗೂ ಸದಾಶಿವ ಶೆಟ್ಟಿ ಹೇಳಿದರು.

By Suddi9

Leave a Reply

Your email address will not be published. Required fields are marked *