ಗುರುಪುರ : ಲೋಕಸಭಾ ಚುನಾವಣೆಯು ಎ. 18ರಂದು ನಡೆಯಲಿರುವ ಪ್ರಚಾರ ಕಾರ್ಯಕ್ರಮ ಮಂಗಳವಾರ ಕೊನೆಗೊಂಡಿದ್ದು, ಗುರುಪುರ ಕೈಕಂಬದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮೀನು ಮಾರುಕಟ್ಟೆ, ಹೂವಿನ ಮಾರುಕಟ್ಟೆ ಸಹಿತ ಪ್ರತಿಯೊಂದು ಅಂಗಡಿಯಲ್ಲೂ ಬಿರುಸಿನ ಮತ ಯಾಚನೆ ನಡೆಸಿದರು. ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ಜಿಪಂ ಸದಸ್ಯ ಯುಪಿ ಇಬ್ರಾಹಿಂ ನೇತೃತ್ವದಲ್ಲಿ ನಡೆದ ಮತ ಯಾಚನೆ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಪುರುಷೋತ್ತಮ ಮಲ್ಲಿ, ಅಬ್ದುಲ್ ಬಾಷಾ, ಬಾಷಾ ಮಾಸ್ಟರ್, ಉಂಞ ಗುರುಪುರ, ಗ್ಲಾಡಿಸ್ ಕ್ವಾಡ್ರಸ್, ಮೆಲ್ವಿನ ಡಿ’ಸೋಜ, ಎ ಕೆ ಆಶ್ರಫ್, ಹರೀಶ್ ಭಂಡಾರಿ, ಮುಸ್ತಫಾ ಮತ್ತಿತರರು ಇದ್ದರು.


