ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಎ.15 ರಿಂದ ಎ.21ರ ತನಕ ಬೆಳಿಗ್ಗೆ 9.30ರಿಂದ ಸಂಜೆ 4.30 ರತನಕ ಉಚಿತ ಬೇಸಿಗೆಯ ಮಕ್ಕಳ ಚೈತನ್ಯ ಶಿಬಿರ ನಡೆಯಲಿದೆ. ಇದರಲ್ಲಿ ಮಕ್ಕಳ ಬುದ್ದಿಮತ್ತೆಯ ಸಂವರ್ಧನೆಗಾಗಿ ವಿವಿಧ ಪ್ರಶಿಕ್ಷಣಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಯೋಗ, ಸೂರ್ಯನಮಸ್ಕಾರ, ಮತ್ತು ಪ್ರಾಣಾಯಾಮ ಕರಾಟೆ,ವಿವಿಧ ಕರ ಕೌಶಲ್ಯ,ವಿವಿಧ ಆಟ, ಕ್ರೀಡೆ-ಒಳಾಂಗಣ ಮತ್ತು ಹೊರಾಂಗಣ,ಶಾಸ್ತ್ರೀಯ ಸಂಗೀತ, ಭಜನೆ ಭಾಷಣ, ಚರ್ಚಾಕೂಟ, ಪ್ರಬಂಧ ಸ್ಪರ್ಧೆ,ಚುಟುಕು ಪ್ರಶ್ನೋತ್ತರ, ಭವಿಷ್ಯ ನಿರೂಪಣೆಯ ಮಾರ್ಗದರ್ಶನ, ಸ್ವಚ್ಚ ಭಾರತ್ ಅಭಿಯಾನ, ಮುಂತಾದ ಪ್ರಶಿಕ್ಷಣಗಳನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳೆಲ್ಲರೂ ತಮ್ಮ ವ್ಯಕ್ತಿತ್ವವನ್ನು ನಿರ್ಮಾಣಗೊಳಿಸಿಕೊಂಡು ಶ್ರೇಯ ಮಾರ್ಗದಲ್ಲಿ ಜೀವನವನ್ನು ಮುಂದುವರಿಸುವುದಕ್ಕಾಗಿ ಇಂತಹ ಸುಸಂದಿಯ ಸದುಪಯೋಗ ಪಡಿಸಿಕೊಳ್ಳಬೇಕಾಗಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ತಿಳಿಸಿದ್ದಾರೆ.
ರಾಮಕೃಷ್ಣ ತಪೋವನದಲ್ಲಿ ಲಭ್ಯವಾಗುವ ನಿರಂತರ ಸೇವೆಗಳು
*ಬಡ ಗಂಡು ಮಕ್ಕಳಿಗೆ ಉಚಿತ ವಿದ್ಯಾರ್ಥಿ ನಿಲಯ ಸೌಲಭ್ಯ
*ಸ್ವಾಮಿ ವಿವೇಕಾನಂದ ಕಂಪ್ಯೂಟರ್ ತರಬೇತಿ ಕೇಂದ್ರ(ರಿಯಾಯಿತಿ ದರದಲ್ಲಿ ವಿವಿಧ ಕಂಪ್ಯೂಟರ್ ತರಗತಿಗಳು)
*ಬ್ಯೂಟೀಷಿಯನ್ ತರಬೇತಿ ತರಗತಿಗಳು
*ಪುಸ್ತಕ ಮಳಿಗೆ ವಾಚನಾಲಯ ಸೌಲಭ್ಯ
*ಪ್ರತೀ ಬುಧವಾರ ವೈದ್ಯಕೀಯ ಚಿಕಿತ್ಸಾಲಯ
*ಪ್ರತೀ ಭಾನುವಾರ ಬೆಳಿಗ್ಗೆ ಯಕ್ಷಗಾನದ ಹಿಮ್ಮೇಳ ಮತ್ತು ಮುಮ್ಮೇಳ ತರಗತಿಗಳು ಉಚಿತವಾಗಿ ನಡೆಯುತ್ತವೆ
*ಭರತನಾಟ್ಯ ತರಗತಿಗಳು ನಡೆಯುತ್ತವೆ
*ಹಾರ್ಮೋನಿಯಂ, ತಬಲ, ಕೊಳಲು,ಭಜನೆ ಉಚಿತ ತರಗತಿಗಳು ಪ್ರತೀ ಭಾನುವಾರ ಬೆಳಿಗ್ಗೆ ನಡೆಯುತ್ತವೆ
*ಪ್ರತೀ ದಿನ ಬೆಳಿಗ್ಗೆ 5 ರಿಂದ 6.30 ರತನಕ ಉಚಿತ ಯೋಗ ತರಗತಿಗಳು
*ಗ್ರಾಮೀಣ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ನಡೆಯುತ್ತದೆ.
*ಪ್ರತಿ ಶನಿವಾರ ಮತ್ತು ಭಾನುವಾರ ಸಮರ ಕಲೆಗಳು(ಮಾರ್ಷಲ್ ಆರ್ಟ್) ನಡೆಯುತ್ತವೆ.
