ಪೊಳಲಿ: ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಅವಭೃತ ಸ್ನಾನ ಫಲ್ಗುಣಿ ನದಿಯ ತಟದಲ್ಲಿ ಮಳಲಿಯ ಕಡಪು ಕರಿಯ ಎಂಬಲ್ಲಿ ಸಂಪನ್ನವಾಯಿತು. ವಾಡಿಕೆಯಂತೆ ಆರಾಟದ ರಾತ್ರಿ ದೇವರ ಸವಾರಿ ಹೊರಟು, ಜಳಕದ ಕಟ್ಟೆಯಲ್ಲಿ ಶ್ರೀ ದೇವರ ಮಂಗಳಸ್ನಾನ ಸಂಪನ್ನವಾಯಿತು. ತಂತ್ರಿಗಳು,ಅರ್ಚಕವೃಂದ,ಹಾಗೂ ದೇವಳದ ಆಡಳಿತ ವರ್ಗ, ಕಾರ್ಯನಿರ್ವಹಣಾಧಿಕಾರಿ,ಭಕ್ತಾಧಿಗಳು ಈ ಮಂಗಳಕಾರ್ಯದಲ್ಲಿ ಉಪಸ್ಥಿತರಿದ್ದರು.



