ಗುರುಪುರ : ದಕ್ಷಿಣ ಕನ್ನಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರವಾಗಿ ಗುರುಪುರ ಮತ್ತು ಅಡ್ಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿ ಮತ ಯಾಚನೆ ನಡೆಸಿದರು. ಲೋಕಸಭಾ ಮತದಾನ ದಿನಾಂಕ ಹತ್ತಿರ ಬರುತ್ತಲೇ ಈ ಭಾಗದಲ್ಲಿ ಬಿಸಿಲ ಬೇಗೆ ಲೆಕ್ಕಿಸದೆ ಪ್ರಚಾರ ಕಾರ್ಯ ಮುಂದುವರಿದಿದೆ. ಪ್ರಚಾರದಲ್ಲಿ ಸಾಕಷ್ಟು ಕಾಂಗ್ರೆಸ್ ಕಾರ್ಯಕರ್ತೆಯರೂ ಪಾಲ್ಗೊಂಡಿದ್ದಾರೆ. ಗುರುಪುರ ಗ್ರಾಪಂ ಉಪಾಧ್ಯಕ್ಷ ಜಿ ಎಂ ಉದಯ ಭಟ್, ತಾಪಂ ಸದಸ್ಯ ಸಚಿನ್ ಅಡಪ, ಗುರುಪುರ ವಲಯ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಮಲ್ಲಿ ನೇತೃತ್ವದಲ್ಲಿ ಪ್ರಚಾರ ಕಾರ್ಯ ನಡೆಯಿತು. ಬಹುತೇಕ ಎಲ್ಲ ಕಡೆ ಈ ಬಾರಿ ಯುವ ಅಭ್ಯರ್ಥಿ ರೈಗೆ ಬೆಂಬಲ ವ್ಯಕ್ತವಾಗಿದೆ ಎಂದು ಭಟ್ ತಿಳಿಸಿದರು.

