ಐಪಿಎಲ್ 2014 ಹರಾಜು: ಯುವರಾಜ್ಗೆ ಬಂಪರ್, ಪೀಟರ್ಸನ್, ಕಾತರ್ಿಕ್ಗೂ ಡಿಮ್ಯಾಂಡ್
ಸುದ್ದಿ9ಬೆಂಗಳೂರು: ಒಂದೆಡೆ ಕಳೆದ ಬಾರಿಯ ಐಪಿಎಲ್ ಪಂದ್ಯಾವಳಿಯಲ್ಲಿ ನಡೆದ ಸ್ಫಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದಲ್ಲಿ ಪ್ರಮುಖ ಭಾರತೀಯ ಆಟಗಾರರ ಹೆಸರು ಕೇಳಿಬರುತ್ತಿದ್ದರೆ ಮತ್ತೊಂದೆಡೆ 2014ರ ಸಾಲಿನ ಐಪಿಎಲ್ ಗುದ್ದಾಟಕ್ಕೆ ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು ಕೆಲವು ಆಟಗಾರರು ಭರ್ಜರಿ ಬೆಲೆಗೆ ಬಿಕರಿಯಾಗುತ್ತಿದ್ದಾರೆ.
ಶ್ವಾಸಕೋಶದ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಂಡ ಯುವರಾಜ್ ಸಿಂಗ್ ನಂತರ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಪರದಾಡುತ್ತಿದ್ದರು. ಆದರೆ ಈ ಸಲದ ಐಪಿಎಲ್ ಹರಾಜಿನಲ್ಲಿ ಹದಿನಾಲ್ಕು ಕೋಟಿ ಮೊತ್ತಕ್ಕೆ ರಾಯಲ್ ಚಾಲೆಂಜಸರ್್ ಬೆಂಗಳೂರು ತಂಡ ಯುವಿಯನ್ನು ಖರೀದಿಸುವ ಮೂಲಕ ಆತನ ಯೋಗ್ಯತೆಯನ್ನು ಎತ್ತಿ ಹಿಡಿದಿದೆ. ಇನ್ನು ಕಳಪೆ ಬೌಲಿಂಗ್ ಪ್ರದರ್ಶನದಿಂದ ಟೀಂ ಇಂಡಿಯಾದ ಹಲವು ಸೋಲಿಗೆ ಕಾರಣವಾಗಿದ್ದ ಇಶಾಂತ್ ಶಮರ್ಾನ ಮೂಲಧನ ಒಂದೂವರೆ ಕೋಟಿಯಾಗಿದ್ದು, ಆತ ಎರಡು ಕೋಟಿ ಅರುವತ್ತು ಲಕ್ಷಕ್ಕೆ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಬಿಕರಿಯಾಗಿದ್ದಾನೆ. ವಿಕೆಟ್ ಕೀಪರ್ ಬ್ಯಾಟ್ಸ್ಮ್ಯಾನ್ ದಿನೇಶ್ ಕಾತರ್ಿಕ್ 12 ಕೋಟಿ 50 ಲಕ್ಷ ರೂ,ಗೆ ಡೆಲ್ಲಿಡೇರ್ ಡೆವಿಲ್ಸ್ ಪಾಲಾದರೆ, ಕೆವಿನ್ ಪೀಟರ್ಸನ್ನನ್ನು ಕೂಡಾ ಒಂಬತ್ತು ಕೋಟಿ ಮೊತ್ತಕ್ಕೆ ಡೆಲ್ಲಿ ತಂಡ ಖರೀದಿಸಿದೆ. ವಿಶೇಷವೆಂದರೆ ಶ್ರೀಲಂಕಾದ ಭರವಸೆಯ ಆಟಗಾರ ಮಹೇಲಾ ಜಯವರ್ಧನೆಯನ್ನು ಯಾರೂ ಖರೀದಿಸುವ ಗೋಜಿಗೆ ಹೋಗಲಿಲ್ಲ. ಈ ಕಾರಣದಿಂದ ಆತ ಮಾರಾಟವಾಗದೆ ಉಳಿದ ಒಬ್ಬಂಟಿ ಬ್ಯಾಟ್ಸ್ಮ್ಯಾನ್ ಆಗಿದ್ದಾನೆ. ಈತನ ಮೂಲಧನವು ಎರಡು ಕೋಟಿಯಾಗಿತ್ತು. ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 514 ಆಟಗಾರರು ಹರಾಜಾಗಲಿದ್ದು ಅವರಲ್ಲಿ 318 ಆಟಗಾರರು ಭಾರತೀಯರಾಗಿದ್ದಾರೆ. ಎರಡು ದಿನಗಳ ಕಾಲ ನಡೆಯಲಿರುವ ಈ ಪ್ರಕ್ರಿಯೆಯಲ್ಲಿ ಭಾರತೀಯ ಆಟಗಾರರು ಅತೀ ಹೆಚ್ಚಿನ ಮೊತ್ತಕ್ಕೆ ಹರಾಜಾಗುತ್ತಿದ್ದಾರೆ.
