
ಬೆಂಗಳೂರು: ಇಲ್ಲಿ ನಡೆಯುತ್ತಿರುವ ಐಪಿಎಲ್ ಬಿಡ್ಡಿಂಗ್ನಲ್ಲಿ ಯುವರಾಜ್ ಸಿಂಗ್ ಅತೀ ಹೆಚ್ಚು ಅಂದರೆ 14 ಕೋಟಿ ರೂ, ಮೊತ್ತಕ್ಕೆ ಹರಾಜಾಗುವ ಮೂಲಕ ಎಲ್ಲರನ್ನೂ ಆಶ್ಚರ್ಯಗೊಳಿಸಿದ್ದರು. ಇಂದು ಕೇವಲ ಕೆಳದಜರ್ೆಯ ಆಟಗಾರರ ಹರಾಜು ನಡೆಯಲಿರುವ ಕಾರಣ ಈ ಮೊತ್ತವನ್ನು ಹಿಂದಿಕ್ಕುವುದು ಅಸಾಧ್ಯ. ಆದರೆ ರಾಯಲ್ ಚಾಲೆಂಜಸರ್್ ಬೆಂಗಳೂರು ತಂಡ ಯುವಿಯನ್ನು ಇಷ್ಟೊಂದು ಬೃಹತ್ ಮೊತ್ತಕ್ಕೆ ಖರೀದಿಸಲು ಮುಖ್ಯ ಕಾರಣ ವಿರಾಟ್ ಕೊಹ್ಲಿ ಎಂದು ತಿಳಿದುಬಂದಿದೆ.
ಬೆಂಗಳೂರು ತಂಡ ಬಹುತೇಕ ಏಕವ್ಯಕ್ತಿ ತಂಡವಾಗಿ ಕಳೆದ ಬಾರಿಯ ಐಪಿಎಲ್ನಲ್ಲಿ ಹೊರಹೊಮ್ಮಿತ್ತು. ತಂಡದ ಆರಂಭಿಕ ಆಟಗಾರ ಕ್ರಿಸ್ ಗೇಲ್ ರನ್ ಗಳಿಸಿದರೆ ಮಾತ್ರ ತಂಡಕ್ಕೆ ಗೆಲ್ಲುವ ವಿಶ್ವಸವಿತ್ತು ಇಲ್ಲವಾದಲ್ಲಿ ಎದುರಾಳಿ ತಂಡ ಹೆಚ್ಚುಕಡಿಮೆ ಪಂದ್ಯವನ್ನು ಗೆದ್ದಂತೆಯೇ ಎಂದು ಪರಿಗಣಿಸಲಾಗುತ್ತಿತ್ತು. ಈ ಅಚಾತುರ್ಯವನ್ನು ತಪ್ಪಿಸಲು ವಿರಾಟ್ ಕೊಹ್ಲಿ ತಂಡದಲ್ಲಿ ಯುವಿಯಂಥ ಅನುಭವಿ ಹಾಗೂ ಸ್ಫೋಟಕ ಆಟಗಾರನ ಅಗತ್ಯದ ಬಗ್ಗೆ ಮಲ್ಯಾರಿಗೆ ಮನವರಿಕೆ ಮಾಡಿದ್ದ. ಈ ಕಾರಣಕ್ಕಾಗಿಯೇ ನಾಲ್ಕು ಕೋಟಿ ಹೆಚ್ಚುವರಿ ತೆತ್ತು ಯುವಿಯನ್ನು ತಂಡದಲ್ಲಿ ಸೇರಿಸಲಾಗಿದೆ. ಆರಂಭದಲ್ಲಿ ಯುವಿ ಬಿಡ್ಡಿಂಗ್ ಹತ್ತು ಕೋಟಿಗೆ ನಿಂತಿತ್ತು. ಆ ವೇಳೆಗೆ ಮಧ್ಯ ಪ್ರವೇಶಿಸಿದ ಕೊಲ್ಕತ್ತಾ ನೈಟ್ರೈಡಸರ್್ ತಂಡ ಏಕಾಏಕಿ ಯುವಿ ಬಿಡ್ಡಿಂಗ್ ಏರಿಸಲು ಆರಂಭಿಸಿತ್ತು. ಕೊನೆಯದಾಗಿ ಅದು 14 ಕೋಟಿ ರೂ,ಗೆ ಬಂದು ನಿಂತಿತು. ಇದರಿಂದ ಮಲ್ಯ ಹೆಚ್ಚುವರಿಯಾಗಿ ನಾಲ್ಕು ಕೋಟಿ ರೂ, ಬಿಡ್ಡಿಂಗ್ ಕರೆಯುವ ಮೂಲಕ ಯುವಿಯನ್ನು ತಮ್ಮ ವಶ ಮಾಡಿಕೊಂಡರು. ಸದ್ಯ ಕಳಪೆ ಫಾಮರ್್ನಲ್ಲಿರುವ ಮತ್ತು ದೈಹಿಕವಾಗಿಯೂ ಅಷ್ಟೊಂದು ಸಮರ್ಥನಲ್ಲದ ಯುವರಾಜ್ಗೆ ಇಷ್ಟೊಂದು ಬೃಹತ್ ಮೊತ್ತ ನೀಡಿರುವುದು ಸರಿಯೇ ಎಂಬ ಅನುಮಾನ ಕ್ರಿಕೆಟ್ ಲೋಕವನ್ನು ಕಾಡುತ್ತಿದೆ. ಆದರೆ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡುವ ಸಾಮಥ್ರ್ಯವಿರುವ ಯುವಿ ಐಪಿಎಲ್ನಲ್ಲಿ ತನ್ನ ಹೊಡೆಬಡಿಯ ಆಟವನ್ನು ಪ್ರದಶರ್ಿಸುವ ಮೂಲಕ ಟೀಕಾಕಾರರ ಬಾಯಿಗೆ ಬೀಗ ಹಾಕುವ ಕೆಲಸ ಮಾಡಬೇಕಿದೆ
