ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಪುತ್ತೂರು ಮತ್ತು ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ ಪ ಇವರರ ಸಂಯುಕ್ತಾಶ್ರಯದಲ್ಲಿ 14 ಮತ್ತು 17 ವರ್ಷದ ವಯೋಮಿತಿ ಯೊಳಗಿನ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ವಿಭಾಗದ ಚೆಸ್  ಪಂದ್ಯಾಟ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ನಡೆಸಲಾಯಿತು.

ಬಂಟ್ವಾಳ ಎಲ್. ಸಿ.ಆರ್ ವಿದ್ಯಾಸಂಸ್ಥೆಯ ಪ್ರಾಥಮಿಕ ವಿಭಾಗದ 7ನೇ ತರಗತಿಯ ವಿದ್ಯಾರ್ಥಿ ನಮನ್ ಸಿ ಶೆಟ್ಟಿ  ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ಭಾಗವಹಿಸಿ ತೃತೀಯ ಸ್ಥಾನ ಪಡೆದು ಕೊಪ್ಪಳದಲ್ಲಿ ನಡೆಯುವ ರಾಜ್ಯಮಟ್ಟದ ಚೆಸ್ ಪಂದ್ಯಾಟಕ್ಕೆ ಆಯ್ಕೆ ಯಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ.ಇವರು  ಎಂ ಚಂದ್ರಹಾಸ ಶೆಟ್ಟಿ ಮತ್ತು  ವಿನಯ ರೈ ದಂಪತಿಯ ಪುತ್ರನಾಗಿದ್ದಾರೆ.ಇವರಿಗೆ ಶಾಲೆಯ ದೈಹಿಕ ಶಿಕ್ಷಕಿಯಾದ ಹರಿಣಾಕ್ಷಿ ಇವರು ತರಬೇತಿಯನ್ನು ನೀಡಿರುತ್ತಾರೆ.ವಿಜೇತ ವಿದ್ಯಾರ್ಥಿ ಯನ್ನು ಸಂಸ್ಥೆಯ  , ಆಡಳಿತ ಮಂಡಳಿ, ಪ್ರಾಂಶುಪಾಲರಾದ ಜೋಸ್ಟನ್ ಲೋಬೋ ಸಂಯೋಜಕರಾದ ಯಶವಂತ್ ಜಿ. ನಾಯಕ್ ಹಾಗೂ ಮುಖ್ಯೋಪಾಧ್ಯಾಯಿನಿ ಯಾದ   ವಿಜಯ ಕೆ ಇವರು ಅಭಿನಂದಿಸಿದ್ದಾರೆ.

By Suddi9

Leave a Reply

Your email address will not be published. Required fields are marked *