ಈ ಸಹಸ್ರಪದಿಯನ್ನು ಅಚ್ಚರಿಯಿಂದ ಗಮನಿಸಿ. ಒಂದರ ಮೇಲೆ ಒಂದು ಕುಳಿತು ಬಂಡಿಸವಾರಿ ಮಾಡುವ ಈ ಸಹಸ್ರಪದಿ ಏನು ಮಾಡ್ತಾ ಇದೆ ಎಂಬ ಅಚ್ಚರಿ ನಿಮ್ಮನ್ನು ಚಕಿತರನ್ನಾಗಿ ಮಾಡುತ್ತಿದೆಯಾ? ಈ ಸಹಸ್ರಪದಿ ಸಂತಾನಾಭಿವೃದ್ಧಿ ಮಾಡುವ ಸಮಯವಿದು.
ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಒಮ್ಮೆಲೆ ಕಾಣಸಿಗುವ ಸಹಸ್ರಪದಿ ಜಾತಿಗೆ ಸೇರಿದ ಈ ಜೀವಿಗಳು ಯಾವುದೋ ಅರ್ಜೆಂಟ್ ಕೆಲಸವಿದೆ ಎಂಬಂತ ರೀತಿಯಲ್ಲಿ ಓಡಾಟ ನಡೆಸುತ್ತದೆ. ಮೈ ಮೇಲೆ ಕಪ್ಪು ಬಣ್ಣ ಹಾಗೂ ಹೊಳೆಯುವ ಹಳದಿ ಬಣ್ಣದಿಂದ ಕೂಡಿರುವ ಈ ಜೀವಿ ಸುಂದರವಾಗಿದ್ದು, ಒಮ್ಮೆಲೆ ಮುಟ್ಟಿ ಬಿಡೋಣ ಎಂದನಿಸುತ್ತದೆ.

DSC01876

6

5

1

2

3

ಯಾವುದೇ ರಗಳೆ ಕೊಡದೆ ಇರುವ ಈ ಜೀವಿಸುವ ಈ ಜೀವಿಗಳು ಸಣ್ಣ ಸಣ್ಣ ಕೀಟ, ಹುಳು. ಗೊಬ್ಬರ, ಎಲೆ ಕಸಕಡ್ಡಿ ತಿಂದು ಜೀವನ ನಡೆಸುತ್ತದೆ. ಆಗಸ್ಟ್-ಸೆಪ್ಟೆಂಬರ್ ತಿಂಗಳು ಇದು ಬೆದೆಗೆ ಹೋಗುವ ಕಾಲ. ಒಂದಷ್ಟು ಓಡಾಟ ನಡೆಸುತ್ತಾ ತನ್ನ ಸಂಗಾತಿಯನ್ನು ಆರಿಸುವ ಹೆಣ್ಣು ಜೀವಿ, ಗಂಡನ್ನು ತನ್ನ ಬೆನ್ನ ಮೇಲೆ ಕೂರಿಸುತ್ತದೆ. ಈ ವೇಳೆ ಗಂಡಿನ ಜನನಾಂಗ ಹೆಣ್ಣಿನ ಜನನಾಂಗವನ್ನು ಸ್ಪರ್ಷಿಸುತ್ತಿದ್ದು, ತುಂಬಾ ಹೊತ್ತು ಆದ ಬಳಿಕ ವೀರ್ಯಾಣು ಹೆಣ್ಣಿನ ಗರ್ಭ ಸೇರುತ್ತದೆ. ಇದೇ ರೀತಿ ಸಂಜೆಯವರೆಗೂ ಹೆಣ್ಣು ಜೀವಿ ಗಂಡನ್ನು ಬೆನ್ನ ಮೇಲೆ ಹೊರುತ್ತಾ ಸಾಗುತ್ತದೆ.
ಪ್ರಕ್ರಿಯೆ ಮುಗಿದ ಬಳಿಕ ಗಂಡು ಹೆಣ್ಣಿನ ಬೆನ್ನಿನಿಂದ ಇಳಿದು ತನ್ನಷ್ಟಕ್ಕೆ ತನ್ನ ಜೀವನ ನಡೆಸುತ್ತದೆ.
15ರಿಂದ 20 ದಿನ ಕಳೆದ ಬಳಿಕ ಹೆಣ್ಣು ಸಹಸ್ರಪದಿ ಮರೆಯಲ್ಲಿ ಒಂದಷ್ಟು ರಾಶಿ ಗೊದಮೊಟ್ಟೆಗಳನ್ನು ಇಟ್ಟು ಬಿಡುತ್ತದೆ. ಹೀಗೆ ಬಲಿತ ಜೀವ ಒಂದೊಂದಾಗಿಯೇ ಗೂಡು ಬಿಡುವುದು ಕಾಣಿಸುತ್ತದೆ. ಇದೇ ನಮಗೆ ಅಲ್ಲಲ್ಲಿ ಕಾಣಸಿಗುವ ಜೀವಿಗಳು. ಹೇಗಿದೆ ಅಲ್ವಾ ಪ್ಕೃತಿಯ ಸೋಜಿಗ?
ಗಿರಿ….

By suddi9

Leave a Reply

Your email address will not be published. Required fields are marked *