ಗಂಜಿಮಠ: ಗಂಜಿಮಠ ಗ್ರಾಮ ಪಂಚಾಯತ್‍ನ ಬಡಗುಳಿಪಾಡಿ, ತೆಂಕುಳಿಪಾಡಿ ಹಾಗೂ ಮೊಗರು ಗ್ರಾಮದ ಎರಡನೇ ಹಂತದ ಗ್ರಾಮ ಸಭೆಯಲ್ಲಿ ಸ್ವತಃ ನೋಡಲ್ ಅಧಿಕಾರಿಯವರೇ ಗೈರಾಗಿದ್ದು, ಬೆರಳಣೆಕೆಯ ಗ್ರಾಮಸ್ಥರ ಜೊತೆ ಸಭೆ ನಡೆಸಲಾಯಿತು. ಸಭೆಯಲ್ಲಿ ಕೆಲವು ಇಲಾಖೆಗಳ ಅದಿಕಾರಿಗಳು ತಮ್ಮ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರೆ ಇನ್ನುಳಿದ ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದರು. ಸಭೆಯಲ್ಲಿ ನೀರಿನ ಸಮಸ್ಯೆ, ಕಸ, ಚರಂಡಿ, ಸಂತೆ ಮಾರುಕಟ್ಟೆ ಇತ್ಯಾದಿ ವಿಷಯಗಳ ಬಗ್ಗೆ ಗ್ರಾಮಸ್ಥರು ಚರ್ಚೆ ನಡೆಸಿದರು. ಗ್ರಾಮಸ್ಥರು ಸಂಖ್ಯೆ ಕಡಿಮೆ ಇದ್ದುದರಿಂದ ಈ ಗ್ರಾಮಸಭೆ ಅಷ್ಟೊಂದು ಪರಿಣಾಮಕಾರಿಯಾಗಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ.gramasabhe (1)
ಸಭೆಯಲ್ಲಿ ಗ್ರಾಮಸ್ಥರೊಬ್ಬರು ಮಾತನಾಡಿ, ಕೆಲವು ಕಡೆಗಳಲ್ಲಿ ನೀರಿನ ಸಮಸ್ಯೆ ಇದ್ದರೆ ಇನ್ನು ಕೆಲವು ಕಡೆಗಳಲ್ಲಿ ಸೂಕ್ತ ವ್ಯವಸ್ಥೆ ಇಲ್ಲದೆ ನೀರು ಪೋಲಾಗುತ್ತಿದೆ. ಕೆಲವು ಕಡೆಗಳಲ್ಲಿ ಪೈಪ್ ಒಡೆದುಹೋಗಿದ್ದು ನೀರು ವ್ಯರ್ಥವಾಗುತ್ತಿದೆ. ಪಂಚಾಯತ್ ವ್ಯಾಪ್ತಿಯ ಹಲವು ಕಡೆಗಳಲ್ಲಿ ಕಸದ ಸಮಸ್ಯೆ ಇದ್ದು ಸೂಕ್ತ ರೀತಿಯಲ್ಲಿ ವಿಲೇವಾರಿಯಾಗುತ್ತಿಲ್ಲ. ರಸ್ತೆ ಬದಿಗಳಲ್ಲಿ ಹುಲ್ಲುಗಳು ಬೆಳೆದಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಬೀದಿದೀಪಗಳು ಹಗಲು ಹೊತ್ತು ಕೂಡ ಉರಿಯುತ್ತಿದೆ. ಸರಕಾರ ಇಂಥಾ ಯೋಜನೆಗಳಿಗಾಗಿ ಲಕ್ಷಾಂತರ ಹಣ ವಿನಿಯೋಗಿಸುತ್ತಿದ್ದು, ಅವುಗಳ ಅಸಮರ್ಪಕ ಬಳಕೆಯಿಂದ ಸರಕಾರಕ್ಕೆ ಸಾಕಷ್ಟು ನಷ್ಟ ಉಂಟಾಗುತ್ತಿದೆ. ಸಮಸ್ಯೆಗಳ ಬಗ್ಗೆ ಪಂಚಾಯತ್‍ಗೆ ತಿಳಿಸುವ ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ಈ ರೀತಿಯಾಗಲು ಕಾರಣ. ಅದಕ್ಕಾಗಿ ಪಂಚಾಯತ್‍ನಲ್ಲಿ ಸಹಾಯವಾಣಿಯನ್ನು ಆರಂಭಿಸಿ, ಸಮಸ್ಯೆಗಳ, ದೂರುಗಳ ಬಗ್ಗೆ ನೇರವಾಗಿ ಮಾಹಿತಿ ನೀಡಲು ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಗ್ರಾ.ಪಂ. ಅಧ್ಯಕ್ಷೆ ಮಾಲತಿ ಅವರು ಮಾತಾಡಿ, ಪಂಚಾಯತ್‍ನ ಕೆಲಸ ಕಾರ್ಯಗಳ ಬಗ್ಗೆ ಸಾರ್ವಜನಿಕರು ಕೈಜೋಡಿಸಿದರೆ ಸಮಸ್ಯೆಗಳನ್ನು ನಿಯಂತ್ರಿಸಬಹುದು. ಬೀದಿದೀಪಗಳನ್ನು ಉರಿಸಲು ಅಥವಾ ನಂದಿಸಲು ಸಾರ್ವಜನಿಕರೇ ಮುಂದಾದರೆ ಸರಕಾರಕ್ಕೆ ಆಗುವ ನಷ್ಟವನ್ನು ತಪ್ಪಿಸಬಹುದು. ಕುಡಿಯುವ ನೀರಿನ ಪೈಪ್ ಒಡೆದರೆ ಪಂಚಾಯತ್ ವತಿಯಿಂದ ಸರಿಮಾಡಲಾಗುತ್ತದೆ. ಸಮಸ್ಯೆಗಳಿದ್ದರೆ ಆಯಾಯ ಗ್ರಾಮದ ಗ್ರಾ.ಪಂ. ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಓ ಅಥವಾ ಪಂಚಾಯತ್‍ನ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದು ಎಂದು ತಿಳಿಸಿದರು.
ಮೂರು ಗ್ರಾಮಗಳಲ್ಲಿ ಸುಮಾರು 2000ಕ್ಕೂ ಅಧಿಕ ಜನಸಂಖ್ಯೆ ಇದ್ದರೂ ಗ್ರಾಮಸ್ಥರ ಸಂಖ್ಯೆ ಬೆರಳೆಣಿಕೆಯಲ್ಲಿತ್ತು. ಕೆಲವು ಪಂಚಾಯತ್ ಸದಸ್ಯರೂ ಗೈರಾಗಿದ್ದರು. ನೋಡಲ್ ಅಧಿಕಾರಿಯವರಿಗೆ ಸಾಕಷ್ಟು ಹೊತ್ತು ಕಾದು ಅವರು ಬಾರದ ಕಾರಣ ಅವರ ಅನುಪಸ್ಥಿತಿಯಲ್ಲೇ ಗ್ರಾಮ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಪಿಡಿಓ ಹಸನಬ್ಬ, ಹಲವು ಇಲಾಖೆಯ ಅಧಿಕಾರಿಗಳು, ಜಿ.ಪಂ, ಸದಸ್ಯ ಯು.ಪಿ. ಇಬ್ರಾಹಿಂ, ತಾ.ಪಂ. ಸದಸ್ಯ ಸುನಿಲ್ ಕುಮಾರ್, ಪಂಚಾಯತ್ ಸದಸ್ಯರು ಹಾಜರಿದ್ದರು.

 

By suddi9

Leave a Reply

Your email address will not be published. Required fields are marked *