ಬಂಟ್ವಾಳ: ತಾಲೂಕಿನ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲಂತಸ್ತಿನ ಕಟ್ಟಡದ ಲೋಕಾರ್ಪಣೆ ಸಮಾರಂಭವು ಡಿ.5 ಮತ್ತು ಡಿ.6ರಂದು ನಡೆಯಲಿದ್ದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವಿರೇಂದ್ರ ಹೆಗ್ಗಡೆಯವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಈ ಸಂದರ್ಭ ದುರ್ಗಾ ಫ್ರಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್‍ಅಂಚನ್, ಸದಸ್ಯರಾದ ಸಂದೀಪ್ ಸಾಲ್ಯಾನ್, ಪುರುಷೋತ್ತಮ ಅಂಚನ್, ದೀಪಕ್ ಸಾಲ್ಯಾನ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಮಚಂದ್ರ ಪೂಜಾರಿ ಕರೆಂಕಿ ಹಾಜರಿದ್ದರು. 
