ಬಜ್ಪೆ: ಯುವತಿಯೋರ್ವಳು ನಾಪತ್ತೆಯಾದ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದವಳನ್ನು ಕೊಂಪದವು ನೆಲ್ಲಿಗುಡ್ಡೆ ನಿವಾಸಿ ದಿ. ಸೋಮಯ್ಯ ಗೌಡ ಎಂಬವರ ಪುತ್ರಿ ಪೂರ್ಣಿಮಾ(21) ಎಂದು ಗರುತಿಸಲಾಗಿದೆ.
ಈಕೆ ಸೆ.9ರಂದು ಗಂಜಿಮಠದ ಗೇರುಬೀಜ ಕಾರ್ಖಾನೆಗೆ ಬಂದಿದ್ದು, ಸಂಜೆ ಮನೆಗೆ ಬಾರದೆ ಕಾಣೆಯಾಗಿದ್ದಾಳೆ ಎಂದು ಈಕೆಯ ತಾಯಿ ಪುಷ್ಪಾ ಎಂಬವರು ಬಜ್ಪೆ ಠಾಣೆಗೆ ದೂರು ನೀಡಿದ್ದಾರೆ.

