ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಯಕ್ಷಗಾನ ಮೇಳಗಳ 2018-19 ನೇ ಸಾಲಿನ ಸೇವೆ ಬಯಲಾಟಗಳ ತಿರುಗಾಟದ ಆರಂಭ ರವಿವಾರ ನಡೆಯಿತು. ಪ್ರಥಮ ಸೇವೆಯಾಟದ ಪ್ರಯುಕ್ತ ದೇವಳದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಆರು ಮೇಳದ ಕಲಾವಿದರಿಗೆ ಗೆಜ್ಜೆ ನೀಡುವ ಮೂಲಕ ಮೇಳಗಳ ತಿರುಗಾಟಕ್ಕೆ ಚಾಲನೆ ನೀಡಿದರು.
ಆರು ಮೇಳಗಳ ದೇವರ ಪೆಟ್ಟಿಗೆ ,ಚಿನ್ನ, ಬೆಳ್ಳಿಯ ಕಿರೀಟ ಹಾಗೂ ಆಯುಧಗಳನ್ನು ದೇವಳದಲ್ಲಿ ಪೂಜೆ ಬಳಿಕ ಶಾಲಾ ಸರಸ್ವತೀ ಸದನದಲ್ಲಿನ ಚೌಕಿಯಲ್ಲಿ ಪೂಜೆ ನಡೆಯಿತು.
ದೇವಳದ ರಥಬೀದಿಯಲ್ಲಿ ನಿರ್ಮಿಸಿದ ಆರು ರಂಗಸ್ಥಳಗಳಲ್ಲಿ ಬಯಲಾಟ ನಡೆಯಿತು. ಕಟೀಲು ದೇವಳದ ಮೊಕ್ತೇಸರರಾದ ವಾಸುದೇವ ಆಸ್ರಣ್ಣ , ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು, ಕಟೀಲು ಆರು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ , ಅಸ್ರಣ್ಣ ಸಹೋದರರು. ಅತ್ತೂರು ಕೊಡೆತ್ತೂರು ಮಾಗಣೆ ಪ್ರಮುಖರು, ಮತ್ತಿತರರು ಉಪಸ್ಥಿತರಿದ್ದರು.

