ಕಟೀಲು: ವಿಧಾನ ಪರಿಷತ್ ಶಾಸಕರಾದ ಐವನ್ ಡಿ’ಸೋಜಾರವರು ಕಟೀಲಿಗೆ ತೆರಳಿ ಅಸ್ರಣ್ಣರ ಸಭಾಭವನದಲ್ಲಿ ಶನಿವಾರದಂದು ಮುಖ್ಯಮಂತ್ರಿ ಪರಿಹಾರ ನಿಧಿಯ ಅರ್ಜಿದಾರರರಾದ ವಿದ್ಯಾಶಂಕರ್ ಕಟೀಲ್ ಇವರಿಗೆ ರೂ.53,901/- ಹಾಗೂ ಜೆಸಿಂತಾ ಶಾಂತಿ ಪಿಂಟೋ ಕಟೀಲ್ ಇವರಿಗೆ ರೂ. 16,282/- ರೂ. ನ ಚೆಕ್ ವಿತರಣೆಯನ್ನು ಮಾಡಿದರು.

ಈ ಸಂದರ್ಭದಲ್ಲಿ ತಿಮ್ಮಪ್ಪ ಕೋಟ್ಯಾನ್ ಅಧ್ಯಕ್ಷರು ಮುಲ್ಕಿ ಬ್ಲಾಕ್ ಕಾಂಗ್ರೆಸ್ ಇತರ ಹಿಂದುಳಿದ ವರ್ಗ, ಮೋನಪ್ಪ ಶೆಟ್ಟಿ ಎಕ್ಕಾರು ಅಧ್ಯಕ್ಷರು ಬಜಪೆ ವ್ಯವಸಾಯ ಸಹಕಾರಿ ಬ್ಯಾಂಕ್, ಗಣೇಶ್ ಆಚಾರ್ಯ ಮಲ್ಲಿಗೆ ಅಂಗಡಿ ಬ್ಲಾಕ್ ಅಧ್ಯಕ್ಷರು, ಡೇನಿಯಲ್ ಡಿ’ಸೋಜಾ, ಲಕ್ಷ್ಮೀ ದೇವರಗುಡ್ಡೆ, ಸಿರಾಜ್ ಬಜ್ಪೆ, ಜೋಸೆಫ್ ಪುಟಾದೊ, ಮುಂತಾದವರು ಉಪಸ್ಥಿತರಿದ್ದರು.

