ಶ್ರೀ ಶನೀಶ್ವರ ಯಕ್ಷಗಾನ ಮಂಡಳಿಯಿಂದ ಮುಂಬೈನಲ್ಲಿ ತಾಳ ಮದ್ದಳೆ
ಕಿನ್ನಿಗೋಳಿ: ಶ್ರೀ ಶನೀಶ್ವರ ಯಕ್ಷಗಾನ ಮಂಡಳಿ ಪಕ್ಷಿಕೆರೆ ಇವರು ಮುಂಬೈ ಮಹಾನಗರದಲ್ಲಿ ಶನೀಶ್ವರ ಪೂಜೆ ನಡೆಸುವ ಸಲುವಾಗಿ ಸೆಪ್ಟೆಂಬರ್ 21 30 ರ ತನಕ ಮುಂಬೈ ಪ್ರವಾಸ ಕೈಗೊಳ್ಳಲಿದ್ದು, ಮುಂಬೈಯ ವಿವಿಧ ಕಡೆಗಳಲ್ಲಿ ತಾಳಮದ್ದಳೆ ರೂಪದ ಶ್ರೀ ಶನೀಶ್ವರ ಪೂಜೆ ನಡೆಸಿಕೊಡಲಿದ್ದಾರೆ.
ಈ ತಂಡದಲ್ಲಿ ಪ್ರಖ್ಯಾತ ಕಲಾವಿದರು ಭಾಗವಹಿಸಲಿದ್ದಾರೆ ಎಂದು ತಂಡವು ಪ್ರಕಟನೆಯಲ್ಲಿ ತಿಳಿಸಿದೆ.