ಮುಂಬಯಿ: ಭಾರತ್ ಬ್ಯಾಂಕ್ ಕೋ.ಅಪರೇಟಿವ್ (ಮುಂಬಯಿ) ಲಿಮಿಟೆಡ್ ಬ್ಯಾಂಕ್‍ನ ಮಾಜಿ ಕಾರ್ಯಾಧ್ಯಕ್ಷ, ಬಿಲ್ಲವ ಸಮುದಾಯ ಹಿರಿಯ ಮುಂದಾಳು, ಮುಂಬಯಿ ಮಹಾನಗರದ ಹಿರಿಯ ಹೊಟೇಲ್ ಉದ್ಯಮಿ, ಬಿಲ್ಲವ ಶಿರೋಮಣಿ ಸೂರು ಸಿ.ಕರ್ಕೇರ (75) ಚರ್ನಿರೋಡ್‍ನಲ್ಲಿರುವ ಸಾಫಿ ಅಸ್ಪತ್ರೆಯಲ್ಲಿ ನಿಧನರಾದರು.
ಉಡುಪಿ ಜಿಲ್ಲೆಯ ಉಚ್ಚಿಲ ಮೂಲದವರಾಗಿದ್ದ ಸೂರು ಕರ್ಕೇರ ಇವರು ಮಹಾನಗರ ಮುಂಬಯಿಯಲ್ಲಿನ ಮಹೇಶ್ ಲಂಚ್ ಹೊಂಮ್ ಹೋಟೆಲ್ ಸಮೂಹದ ಕಾರ್ಯಾಧ್ಯಕ್ಷರು ಆಗಿದ್ದು ನೂರಾರು ಸಂಘ ಸಂಸ್ಥೆಗಳಿಗೆ ಪೋಷಕರಾಗಿದ್ದರು. ಇವರು ಕೊಡುಗೈ ದಾನಿಯಾಗಿದ್ದು, ಓರ್ವ ಸಾಮಾಜಿಕ ಚಿಂತಕರಾಗಿದ್ದು, ಧಾರ್ಮಿಕ ಸೇವೆಗಳಲ್ಲು ಮುಂಚೂಣಿಯಾಗಿದ್ದರು. ಉಚ್ಚಿಲದಲ್ಲಿ ಒಂದು ಸಭಾಗೃಹವನ್ನು ನಿರ್ಮಿಸಿದರು. ಅನೇಕ ವಿದ್ಯಾಥಿರ್sಗಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡಿದ ಕರ್ಕೇರರು ಸಾಮಾಜಿಕ ಕಳಕಳಿ ಹೊಂದಿದ್ದರು. ಮೃತರು ಭಾರತ್ ಬ್ಯಾಂಕ್‍ನ ನಿರ್ದೇಶಕಿ ಶಾರದಾ ಎಸ್.ಕರ್ಕೇರ (ಪತ್ನಿ), ಸುಪುತ್ರ ಮಹೇಶ್ ಎಸ್.ಕರ್ಕೇರ(ಬಿಸಿಸಿಐ ನಿರ್ದೇಶಕ) ಒಂದು ಹೆಣ್ಣು ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ನ.01 ಗುರುವಾರ ಬೆಳಿಗ್ಗೆ 10.30 ಗಂಟೆಗೆ ಸ್ವಗೃಹ ವೀಣಾ ಟವರ್ಸ್, ಕಾಲೊಬಾದಿಂದ ಮರೀನ್‍ಲೈನ್ಸ್‍ನ ಚಂದನವಾಡಿ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.

