ಫರಂಗಿಪೇಟೆ : ಮಾನವೀಯ ಸಂಭಂದ ಗಳು ಶಿಥಿಲ ಗೊಳ್ಳುತ್ತಿರುವ ಈ ಕಾಲದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ,ಆಚರಣೆ, ಒಳ್ಳೆಯ ಚಿಂತನೆಗಳನ್ನು ಅವರಲ್ಲಿ ಮೂಡಿಸಬೇಕು ಅವರ ಭಾವನೆಗಳು ಕಮರದಂತೆ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುವಂತಹ ವಾತಾವರಣ ವನ್ನು ನಿರ್ಮಿಸುವಂತಹ ಕೆಲಸ ಆಗಬೇಕಾಗಿದೆ ಎಂದು ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದಂಗಳು ಶ್ರೀ ಸುಬ್ರಮಣ್ಯ ಮಠ ಸುಬ್ರಮಣ್ಯ ರವರು ಹೇಳಿದರು.
ದ .ಕ. ಜಿ ಹಿರಿಯ ಪ್ರಾಥಮಿಕ ಶಾಲೆ ಕೊಡ್ಮಾಣ್ ನಲ್ಲಿ ಶ್ರೀ ಶಾರದಾ ಪೂಜಾ ಸೇವಾ ವೇದಿಕೆ ಕೊಡ್ಮಾಣ್ ಇದರ ಆಶ್ರಯದಲ್ಲಿ ಜರಗುವ ೩೦ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವ ೩ ನೇ ದಿನದ ಸಭಾ ಕಾರ್ಯಕ್ರಮ ದಲ್ಲಿ ಅವರು ಆಶೀರ್ವಚನ ನೀಡಿದರು.

farangipete sharada pooje
ಮಂಗಳೂರು ಜಿಲ್ಲಾ ಸಂಘಚಾಲಕರು , ಕೆ ಎಸ್ ಹೆಗ್ಡೆ ಮೆಡಿಕಲ್ ಕಾಲೇಜು ದೇರಳಕಟ್ಟೆ ಇಲ್ಲಿನ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ ಸತೀಶ್ ರಾವ್ ರವರ ಅದ್ಯಕ್ಷತೆ ವಹಿಸಿದ್ದರು.
ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ದಂಪತಿ ಗಳನ್ನ ಅವರ ಸಮಾಜ ಸೇವೆ ಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಕೆ ಅಮರ ನಾಥ್ ಶೆಟ್ಟಿ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ , ಶಾಲಾ ಮುಖ್ಯೋಪಾಧ್ಯಾಯರಾದ ರಾಮಚಂದ್ರ ರಾವ್ , ಶ್ರೀ ಶಾರದಾ ಪೂಜಾ ಸೇವಾ ವೇದಿಕೆ ಯ ಪದಾಧಿಕಾರಿಗಳಾದ ರಾಮಪ್ಪ ಮೂಲ್ಯ , ಸಂದೀಪ್ ಶೆಟ್ಟಿ ಪೊನ್ನೋಡಿ , ವಿಜಯ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ರುವಾರಿ ಗಣ್ಯರಾದ ಕೊಡಮಣ್ಣು ಕಾಂತಪ್ಪ ಶೆಟ್ಟಿ ಯವರು ಸ್ವಾಗತಿಸಿದರು. ಉತ್ಸವ ದ ಅಧ್ಯಕ್ಷರಾದ ಗೋಪಾಲ್ ಕುಲಾಲ್ ವಂದಿಸಿದರು ಪ್ರೊಫೆಸರ್ ವೆಂಕಟ ರಮಣ ರಾವ್ ರವರು ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *