ಬಂಟ್ವಾಳ: ಫಲ್ಗುಣಿ ಸ್ತ್ರೀ ಶಕ್ತಿ ವಿವಿಧೋದ್ದೇಶ ಸಹಕಾರ ಸಂಘ , ನಿ. ಸ್ತ್ರೀ ಶಕ್ತಿ ಭವನ ಬಿಸಿರೋಡ್ ಇದರ 2017-18 ಸಾಲಿನ ವಾರ್ಷಿಕ ಮಹಾಸಭೆ ಬಿಸಿರೋಡಿನ ಲಯನ್ಸ್ ಸೇವಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮ ವನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷೆ ಗೀತಾಜಯತೀರ್ಥ ಈಸಹಕಾರ ಸಂಘ ಬ್ಯಾಂಕ್ ಅಗಿಪರಿವರ್ತನೆ ಮಾಡವ ಯೋಚನೆ ನಡೆಸಲಾಗುತ್ತಿದ್ದು, ಸಂಘದ ಸದಸ್ಯರ ಸಹಕಾರ ಬೇಕಾಗಿದೆ.

1
ಸ್ತ್ರೀ ಯವರ ಆರ್ಥಿಕ ವ್ಯವಸ್ಥೆ ಯನ್ನು ಬಲಿಷ್ಠ ಗೊಳಿಸಲು ಈ ಬ್ಯಾಂಕ್ ಪ್ರಮಾಣಿಕ ಪ್ರಯತ್ನ ಮಾಡುವುದರ ಜೊತೆಗೆ ಸಾಮಾಜಿಕವಾಗಿಯೂ ತೊಡಗಿಸಿಕೊಂಡಿದೆ. ಸಂಸ್ಥೆ ಅರ್ಥಿಕ ವಾಗಿ ಬೆಳೆಯುವ ದ್ರಷ್ಟಿಯಿಂದ ಸ್ತ್ರೀ ಶಕ್ತಿಯ ಸದಸ್ಯರು ಸಹಕಾರ ನೀಡಿ ಎಂದರು.
ಕಾರ್ಯಕ್ರಮ ದಲ್ಲಿ ಬಂಟ್ವಾಳ ಸಿ.ಡಿ.ಪಿ.ಒ ಮಲ್ಲಿಕಾ, ವಿಟ್ಲ ಸಿ.ಡಿ.ಪಿ.ಒ ಸುದಾಜೋಶಿ, ಹಿರಿಯ ಮೇಲ್ವಿಚಾರಕಿ ಗಾಯತ್ರಿಕಂಬಳಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಾಂತ್ವನ ಕೇಂದ್ರದ ಸಿಬ್ಬಂದಿ ಕು.ಗೀತಾ, ನಿರ್ದೇಶಕ ರುಗಳಾದ ರಂಜಿನಿ, ಶೈನಿ, ಸುಧಾ, ಸುಶೀಲಾ, ಸಾರಿಕಾ, ಶಾಂತಿ, ಲೀಲಾ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಂಘದ ಉಪಾಧ್ಯಕ್ಷೆ ಮಲ್ಲಿಕಾ ಶೆಟ್ಟಿ ನಿರೂಪಿಸದರು. ನಿರ್ದೇಶಕ ರಾದ ಸುನೀತಾ ಸ್ವಾಗತಿಸಿ ವಾರಿಜ ಧನ್ಯವಾದ ನೀಡಿದರು. ಪ್ರಮೀಳಾ ವರದಿ ವಾಚಿಸಿದರು.

By Suddi9

Leave a Reply

Your email address will not be published. Required fields are marked *