ಬಂಟ್ವಾಳ: ಜಗತ್ತಿನ ಏಕತೆ ಮತ್ತು ಶಾಂತಿಗಾಗಿ ಸನಾತನ ಹಿಂದೂ ಸಂಸ್ಕøತಿ ಉಳಿಸುವುದರ ಜೊತೆಗೆ ಯಾವುದೇ ಜಾತಿ, ಪಂಗಡಗಳ ತಾರತಮ್ಯ ಇಲ್ಲದೆ ಸಂಘಟಿತರಾಗುವ ಮೂಲಕ ದೇಶವನ್ನು ಸುಭದ್ರ ಮತ್ತು ಬಲಿಷ್ಟಗೊಳಿಸಲು ಸಾಧ್ಯವಿದೆ. ಇದಕ್ಕಾಗಿ ಯುವಜನತೆಗೆ ಬಾಲ್ಯದಿಂದಲೇ ದೇಶೀಯ ಸಂಸ್ಕಾರ ಮತ್ತು ಧಾರ್ಮಿಕತೆ ಬಗ್ಗೆ ಅರಿವು ಮೂಡಿಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕುಂಟಾರು ರವೀಶ್ ತಂತ್ರಿ ಹೇಳಿದರು.

ಸಿದ್ಧಕಟ್ಟೆ ಹಿಂದೂ ಹಿತರಕ್ಷಣಾ ವಿಶ್ವಸ್ಥ ಮಂಡಳಿ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಶುಕ್ರವಾರ ಸಮಾರೋಪಗೊಂಡ 31 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಮಂಗಳೂರು ಮಾತೃಭೂಮಿ ಸಹಕಾರಿ ಸಂಘದ ನಿರ್ದೇಶಕ ಕೃಷ್ಣ ಕೊಂಪದವು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಆರಂಬೋಡಿ ಬೂಬ ಮಾಸ್ತರ್, ಮುಖ್ಯಶಿಕ್ಷಕ ರಾಜೇಶ ನೆಲ್ಯಾಡಿ ಮತ್ತಿತರರು ಶುಭ ಹಾರೈಸಿದರು.
ಇದೇ ವೇಳೆ ನಾಟಿವೈದ್ಯ ರಾಜಾರಾಮ ಶೆಣೈ ನಡಿಬೈಲು ಮತ್ತು ರಾಷ್ಟ್ರೀಯ ಕರಾಟೆಪಟು ನಿತೇಶ್ ಸಂಗಬೆಟ್ಟು ಇವರನ್ನು ಸನ್ಮಾನಿಸಲಾಯಿತು.
ಸಮಿತಿ ಗೌರವಾಧ್ಯಕ್ಷ ಹೇಮಚಂದ್ರ ಗೌಡ, ಪ್ರಮುಖರಾದ ವಸಂತ ಓಣಿದಡಿ, ದೇವಪ್ಪ ಕಣಿಯೂರು, ಕೇಶವ ಶಬರೀಶ, ಗಂಗಾಧರ ಗೌಡ ಕುಕ್ಕೇಡಿ, ಮಹಿಳಾ ಸಮಿತಿ ಅಧ್ಯಕ್ಷೆ ಉಷಾ ಕಿರಣ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಮಮಿತಿ ಅಧ್ಯಕ್ಷ ಸಂದೇಶ ಶೆಟ್ಟಿ ಪೊಡುಂಬ ಸ್ವಾಗತಿಸಿ, ಉಮೇಶ ಗೌಡ ಮಂಚಕಲ್ಲು ವಂದಿಸಿದರು. ದಿನೇಶ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮ ಬಳಿಕ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

ಬಳಿಕ ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆಯಲ್ಲಿ 31ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಶುಕ್ರವಾರ ಸಂಜೆ ನಡೆದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಇಲ್ಲಿನ ಗುಣಶ್ರೀ ವಿದ್ಯಾಲಯ ವಿದ್ಯಾರ್ಥಿಗಳು ಆಕರ್ಷಕ ಯಕ್ಷಗಾನ ನೃತ್ಯ ಪ್ರದರ್ಶಿಸಿ ಜನರ ಗಮನ ಸೆಳೆದರು.
