ಫರಂಗಿಪೇಟೆ: ಓಂ ಶ್ರೀ ವೀರಾಂಜನೇಯ ವ್ಯಾಯಮ ಶಾಲೆಯ ಆಶ್ರಯದಲ್ಲಿ ಜರುಗುವ 37ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಭಾ ಕಾರ್ಯಕ್ರಮ ನಡೆಯಿತು.

poonjalakatte

ಮುಖ್ಯ ಅತಿಥಿಗಳಾದ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಸಂಚಾಲಕರಾದ ಶ್ರೀ ತಾರನಾಥ ಕೊಟ್ಟಾರಿ ಮಾತನಾಡಿ, ಭಗವಾನ್ ಶ್ರೀ ಕೃಷ್ಣ ಭೋಧಿಸಿದ ಭಗವದ್ಗೀತೆಯ ಸಂದೇಶ ಇಡೀ ಮನುಕುಲಕ್ಕೆ ದಾರಿದೀಪವಾಗಿದೆ. ಇದಕ್ಕೆ ವಿಮುಖವಾದಲ್ಲಿ ಸಾಮಾಜಿಕ ಕಲಹಕ್ಕೆ ಕಾರಣವಾದೀತು. ಗೀತೆ ಸಾರವನ್ನು ವಿಶ್ಲೇಸಿದಷ್ಟು ಶ್ರೀ ಕೃಷ್ಣನ ವ್ಯಕ್ತಿತ್ವ ವಿಶ್ವರೂಪವಾಗಿ ಗೋಚರಿಸುತ್ತಿದೆ. ಎಂದು ಹೇಳಿದರು.
ಅರ್ಕುಳ ಬೀಡು ವಜ್ರನಾಭ ಶೆಟ್ಟಿಯವರ ಅಧ್ಯಕ್ಷತೆ ವಹಿಸಿದ್ದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ಕ್ಷೇತ್ರದಿಂದ ಹೊರಟ ಮೊಸರು ಕುಡಿಕೆ ಶೋಭಾಯಾತ್ರೆ ವಿಜೃಂಭಣೆಯಿಂದ ಫರಂಗಿಪೇಟೆ ಉದ್ದಕ್ಕೂ ಕಟ್ಟಿದ ಮೊಸರು ಕುಡಿಕೆ ಒಡೆದುದು ಮನಮೋಹಕವಾಗಿತ್ತು. ನಂತರ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಕಲ್ಲಡ್ಕ ವಿಠಲ್ ನಾಯಕ್ ತಂಡದಿಂದ ಗೀತ ಸಾಹಿತ್ಯ ಸಂಭ್ರಮ ನಡೆಯಿತು.
ಈ ಸಂದರ್ಭದಲ್ಲಿ ಉಳ್ಳಾಕ್ಲು ಮಗ್ರಂತಾಯಿ ದೈವಸ್ಥಾನದ ಗಡಿಕಾರರಾದ ಸದಾನಂದ ಆಳ್ವ ಕಂಪ, ಉದ್ಯಮಿಗಳಾದ ಉಮಾನಾಥ ಕೊಟ್ಟಾರಿ ಮಂಗಳೂರು, ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯ ಅಧ್ಯಕ್ಷರಾದ ಸುಜೀರು ಗುತ್ತು ಚಂದ್ರಶೇಖರ ಗಾಂಭೀರ, ಉತ್ಸವ ಸಮಿತಿ ಅಧ್ಯಕ್ಷರಾದ ಜಗದೀಶ ಬೊಳ್ಳಾನ, ಕಾರ್ಯದರ್ಶಿಗಳಾದ ಧನರಾಜ್ ಶೆಟ್ಟಿ ತೇವು, ಮತ್ತಿತರರು ಉಪಸ್ಥಿತರಿದ್ದರು.
ಸುಕೇಶ್ ಶೆಟ್ಟಿ ತೇವು ಸ್ವಾಗತಿಸಿದರು. ದಿನಕರ ಕರ್ಕೇರಾ ಮಂಟಮೆ ವಂದಿಸಿದರು. ಜಗದೀಶ ಕಡೆಗೋಳಿ ಮತ್ತು ಕರುಣಾಕರ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *