ಗುರುಪುರ:ಶ್ರೀಕೃಷ್ಣ ಮಿತ್ರ ಮಂಡಳಿ ಗುರುಪುರ ಇದರ ವತಿಯಿಂದ 50ನೇ ವರ್ಷದ ಮೊಸರು ಕುಡಿಕೆ ಉತ್ಸವ ಸೆ.3ರಂದು ಸೋಮವಾರ ಸಂಜೆ 4 ಗಂಟೆಯಿಂದ ಗುರುಪುರ ಜಂಗಮ ಮಠದ ವಠಾರದಲ್ಲಿ ನಡೆಯಲಿದೆ.

ಸೆ.2 ರಂದು ಭಾನುವಾರ :

ಬೆಳಗ್ಗೆ 9 ಗಂಟೆಗೆ ಸಂಗೀತ ಸ್ಪರ್ಧೇ 10ಗಂಟೆಗೆ ತುಳು ತಾಳಮದ್ದಳೆ ( ಬಿರು ಪರ್ಬ) 1 ಗಂಟೆಗೆ ಮುದ್ದುಕೃಷ್ಣ ಸ್ಪರ್ಧೆ, ರಾಧಕೃಷ್ಣ ಸ್ಪರ್ಧೆ,ವಿದ್ಯಾರ್ಥಿಗಳಿಗೆ ಸನ್ಮಾನ. ಸಂಜೆ 6ಗಂಟೆಗೆ ಗುರುಪುರ ವಿಶ್ವಾಸ್ ಮೆಲೋಡೀಸ್ ಇವರಿಂದ ಸಂಗೀತ ರಸಮಂಜರಿ.

ಸೆ. 3ರಂದು ಸೋಮವಾರ:

10 ಗಂಟೆಗೆ ಅಡಕೆ ಮರ ಏರಿಸುವುದು. 11 ಗಂಟೆಗೆ ಕುಣಿತ ಭಜನಾ ಸ್ಪರ್ಧೆ 3.ಗಂಟೆಗೆ ಸ್ಟಾರ್ ಕಿಡ್ಸ್ ಇವರಿಂದ ನೃತ್ಯಪ್ರದರ್ಶನ ಹಾಗೂ ಊರ ಪ್ರತಿಭೆಗಳಿಂದಪ್ರತಿಭಾ ಪ್ರದರ್ಶನ. ಸಂಜೆ 4.30 ಕ್ಕೆ ಸಭಾಕಾರ್ಯಕ್ರಮ:
ಸಂಜೆ 6ರಿಂದ ವರ್ಣರಂಜಿತ ಸಾರ್ವಜನಿಕ ಮೊಸರುಕುಡಿಕೆ ಉತ್ಸವ ಮೆರವಣಿಗೆ ನಡೆಯಲಿದೆ ಎಂದು ಶ್ರೀ ಕ್ರಷ್ಣ ಮಿತ್ರಮಂಡಳಿಯ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *