ಪೊಳಲಿ:ಶ್ರೀ ಕ್ರಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಆಶ್ರಮದಲ್ಲಿ ಮೂರು ದಿನಗಳ ಕಾರ್ಯಕ್ರಮ ನಡೆಯಲಿದೆ.ಸೆ.1ರಂದು ಶನಿವಾರ ಬೆಳಗ್ಗೆ 8. ಗಂಟೆಗೆ ಅಖಂಡ ಭಜನಾ ಕಾರ್ಯಕ್ರಮವನ್ನು ಮಂಗಳೂರು ರಾಮಕೃಷ್ಣಮಠದ ಅಧ್ಯಕ್ಷ ಪೂಜ್ಯ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ಚಾಲನೆ ನೀಡಲಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಜನಾ ಮಂಡಳಿಗಳಿಂದ ನಿರಂತರ 24 ಗಂಟೆಗಳ ಭಜನಾ ಸಂಕೀರ್ತನೆ ನಡೆಯಲಿದೆ.
ಸೆ.2ರಂದು ಭಾನುವಾರ: ಬೆಳಗ್ಗೆ 10.30 ರಿಂದ 11.30ರವರೆಗೆ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮತ್ತುತುಳಸಿ ಅರ್ಚನೆ 11.30 ರಿಂದ 11.45 ಕ್ಕೆ ಶ್ರೀಕೃಷ್ಣನಿಗೆ ಅಭಿಷೇಕ. 11.45 ರಿಂದ 12.30 ಕ್ಕೆ ಮಹಾಮಂಗಳಾರತಿ. 12.30ಕ್ಕೆ ಸಾರ್ವಜನಿಕ ಅನ್ನ ಸಂತರ್ಪಣೆ. ಮಧ್ಯಾಹ್ನ 1.30ರಿಂದ 5.30ರವರೆಗೆ ಮಕ್ಕಳ ಛದ್ಮವೇಷಸ್ಪರ್ಧೆ 5.30 ರಿಂದ 6.30 ರವರೆಗೆ ಬಹುಮಾನ ವಿತರಣೆ.
ಸೆ.3 ರಂದು ಸೋಮವಾರ : ಮೊಸರು ಕುಡಿಕೆ ಉತ್ಸವ ಶ್ರೀ ಕೃಷ್ಣ ಲೀಲೋತ್ಸವ ನಡೆಯಲಿದೆ ಎಂದು ಪೊಳಲಿ ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕ ಚೈತನ್ಯಾನಂದ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *