ತೆಂಕಬೆಳ್ಳೂರು:ನಾಗಶ್ರೀ ಮಿತ್ರವ್ರಂದ ಮತ್ತು ನಾಗಶ್ರೀ ಮಿತ್ರವೃಂದ ಕಮ್ಮಾಜೆ ಇದರ ಜಂಟಿ ಆಶ್ರಯದಲ್ಲಿನ ಸೆ. 3ರಂದು ಸೋಮವಾರ ತೆಂಕಬೆಳ್ಳೂರಿನ ಕಮ್ಮಾಜೆ ವಿವೇಕಭವನದ ಬಳಿಯ ಮಾಜಿ ಸೈನಿಕ ಪದ್ಮನಾಭ ಪೊಯ್ಯೆ ಕ್ರೀಂಡಾಂಗಂಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 17ನೇ ವರ್ಷದ ಮೊಸರು ಕುಡಿಕೆ ಉತ್ಸವ ಹಾಗೂ ಶ್ರೀ ಕ್ರಷ್ಣ ದೇವರಭವ್ಯ ಶೋಭಾಯಾತ್ರೆನಡೆಯಲಿದೆ.

ಅಂದು ಬೆಳಗ್ಗೆ 7 ಗಂಟೆಗೆ ಶ್ರೀ ಕಾವೇಶ್ವರ ಭಜನಾ ಮಂಡಳಿಯವರಿಂದ ಭಜನೆ 10.30ರಿಂದ ಆಟೋಟ ಸ್ಪರ್ಧೇಗಳು: ಬಾಲಕ ಮತ್ತು ಬಾಲಕಿಯರಿಗೆ,ಯುವತಿಯರಿಗೆ, ಯುವಕರಿಗೆ, 60ವರ್ಷ ಮೇಲ್ಪಟ್ಟವರಿಗೆ ಮುಂತಾದ ಸ್ಪರ್ಧೆಗಳು ನಡೆಯಲಿದೆ.

ಸಂಜೆ 6 ಗಂಟೆಯಿಂದ ಶ್ರೀಕೃಷ್ಣನ ಭವ್ಯ ಶೋಭಾಯಾತ್ರೆ ನಡೆಯಲಿದೆ ಎಂದು ನಾಗಶ್ರೀ ಮಿತ್ರವೃಂದದ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *