ಬೆಂಗಳೂರು: ನಟಿ ಮೈತ್ರಿಯಾ ಗೌಡ ವಂಚನೆ ಆರೋಪದ ಮೇಲೆ ಬಂಧನದ ಭೀತಿಯಲ್ಲಿರುವ ಕಾರ್ತಿಕ್ ಗೌಡ ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಕ್ಷೀಣವಾಗಿದ್ದು, ಪೊಲೀಸರು ಅವರನ್ನು ನಾಳೆ ಬಂಧಿಸುವುದು ನಿಚ್ಚಳಗೊಂಡಿದೆ.

ಕಾರ್ತಿಕ್ ಗೌಡರ ವಿರುದ್ಧ ನಟಿ ಮೈತ್ರಿಯಾ ಅತ್ಯಾಚಾರ, ವಂಚನೆ, ಅಪಹರಣ ಆರೋಪದಡಿ ಬೆಂಗಳೂರಿನ ಆರ್ ಟಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಕಾರ್ತಿಕ್ ಗೌಡರ ಮೇಲೆ ಸೆ.3ರ ಒಳಗಡೆ ವಿಚಾರಣೆಗೆ ಗಾಜರಾಗಬೇಕೆಂದು ಸೂಚಿಸಿತ್ತು. ಆದರೆ ವಿಚಾರಣೆಗೆ ನೀಡಲಾಗಿದ್ದ ದಿನನಿಗದಿಯ ಅವಧಿ ಮುಗಿದಿದ್ದು, ನಾಳೆ ಪೊಲೀಸರು ಅವರನ್ನು ಬಂಧಿಸಲಿದ್ದಾರೆ.
