ಮಂಗಳೂರು: ಹಜ್ ಯಾತ್ರಿಕರು ಆ. 31ರಂದು ಎರಡು ವಿಮಾನಗಳಲ್ಲಿ ಪ್ರಯಾಣಿಸುವುದರೊಂದಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ಎಲ್ಲ ಯಾತ್ರಿಕರೂ ಯಾನ ಬೆಳೆಸಿದಂತಾಗಿದೆ.

ರವಿವಾರ ಎರಡು ವಿಮಾನಗಳಲ್ಲಿ 122 ಮಂದಿ ಪುರುಷರು, 168 ಮಂದಿ ಮಹಿಳೆಯರು ಮತ್ತು ಒಂದು ಹೆಣ್ಣು ಮಗು ಸೇರಿದಂತೆ ಒಟ್ಟು 341 ಮಂದಿ ಹಜ್ ಯಾತ್ರೆಗೆ ತೆರಳಿದ್ದಾರೆ. ಶನಿವಾರ ಮತ್ತು ರವಿವಾರ ಪ್ರಯಾಣಿಸಬೇಕಾಗಿದ್ದ ಮತ್ತು ಸೋಮವಾರ ಪ್ರಯಾಣಿಸಲಿದ್ದ ಯಾತ್ರಿಕರು ಈ ಎರಡು ವಿಮಾನಗಳಲ್ಲಿದ್ದರು.
ಆ. 27ರಂದು ಮಂಗಳೂರಿನಿಂದ ಹಜ್ ವಿಮಾನ ಯಾನ ಆರಂಭವಾಗಿದ್ದು, 4 ದಿನಗಳಲ್ಲಿ ಒಟ್ಟು 731 ಮಂದಿ ಹಜ್‌ಗೆ ತೆರಳಿದ್ದಾರೆ. ಅವರಲ್ಲಿ 368 ಮಂದಿ ಪುರುಷರು, 362 ಜನ ಮಹಿಳೆಯರು ಮತ್ತು ಒಂದು ಹೆಣ್ಣು ಮಗು ಒಳಗೊಂಡಿದೆ.
