ಉಡುಪಿ: ಪೆರ್ಣಂಕಿಲ ಪಂಚಾಯತ್ ವ್ಯಾಪ್ತಿಯ ಗುಂಡುಪಾದೆಯಲ್ಲಿ ಮನೆಯ ಆವರಣದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ತಾಯಿ ಮಗಳು ಸಾವನ್ನಪ್ಪದ್ದಾರೆ. ತಾಯಿ ಗೋಪಿಬಾಯಿ (85), ಮಗಳು ಸುಮತಿ (64) ಮೃತಪಟ್ಟವರು.
ಮೊದಲು ಮಗಳು ಸುಮತಿ ವಿದ್ಯುತ್ ತಂತಿ ತಗುಲಿತ್ತು. ನಂತರ ಮಗಳನ್ನು ಕಾಪಾಡಲು ಹೋದ ತಾಯಿಗೂ ವಿದ್ಯುತ್ ತಗುಲಿ ಸಾಪನ್ನಪ್ಪಿದ್ದಾರೆ. ಈ ಪ್ರಕರಣ ಹಿರಿಯಡ್ಕ ಠಾಣೆಯಲ್ಲಿ ದಾಖಲಾಗಿದೆ.
