ಕಿನ್ನಿಗೋಳಿ:ಸಾಹಿತ್ಯ ಕೃತಿಗಳು ಜನರ ಮಾನಸಿಕ ಶಾಂತಿ ನೆಮ್ಮದಿ ಹಾಗೂ ಜೀವನ ಸುಧಾರಿಸುವ ಕೆಲಸ ಮಾಡಬೇಕು ಎಂದು ಕನ್ಸೆಟ್ಟಾ ಆಸ್ಪತ್ರೆಯ ನಿರ್ದೇಶಕಿ ಭಗಿನಿ ಡಾ. ಜೀವಿತಾ ಹೇಳಿದರು.
ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ 526ನೇ ಕೃತಿ ಸಿಸ್ಟರ್ ಮಾರಿ ಆಂಜ್ ಬಿ.ಎಸ್. ರಚಿತ “ಬಾ ಬೆಳಕೆ” ಕೃತಿಯನ್ನು ಬುಧವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.

20kinni ba belake ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದರು. ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಸರ್ವೋತ್ತಮ ಅಂಚನ್, ಸಾಹಿತಿ ಕವಿ ಜೊಸ್ಸಿ ಪಿಂಟೊ ಕಿನ್ನಿಗೋಳಿ, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ ಪುನರೂರು, ಹಿರಿಯ ಸಾಹಿತಿ ಉಮೇಶ್ ರಾವ್ ಎಕ್ಕಾರು, ಭಗಿನಿ ಅಮಿತಾ, ಐಕಳ ಹರೀಶ್ ಶೆಟ್ಟಿ, ರಾಮಣ್ಣ ಕುಲಾಲ್ ಉಪಸ್ಥಿತರಿದ್ದರು. ಯುಗಪುರುಷ ಪ್ರಕಟಣಾಲಯದ ಪ್ರಕಾಶಕ ಕೆ. ಭುವನಾಭಿರಾಮ ಉಡುಪ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *